ಬೆಳಗಾವಿ: ತಾಲ್ಲೂಕಿನ ಹೊನಗಾ ಗ್ರಾಮದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ.
ಗ್ರಾಮದ ಹತ್ತಿರವಿರುವ ಭೈರು ಕಲ್ಲಪ್ಪ ಕಾಕತಕರ ಎನ್ನುವರರ ಜಮೀನಿನ ಬಾವಿಯಲ್ಲಿ ಶವ ತೇಲುತ್ತಿರುವುದನ್ನು ಮಾಲೀಕರು ನೋಡಿ ಪೊಲೀಸರಿಗೆ ತಿಳಿಸಿದರು.
ಅಂದಾಜು 40 ವರ್ಷ ವಯಸ್ಸಿನ ವ್ಯಕ್ತಿಯ ಕೈ ಮೇಲೆ ಇಂಗ್ಲಿಷಿನಲ್ಲಿ S.K. ಎಂದು ಬರೆದ ಟ್ಯಾಟೂ ಇದೆ. ಅಂದಾಜು ಮೂರು ದಿನಗಳ ಹಿಂದೆ ವ್ಯಕ್ತಿ ಬಾವಿಗೆ ಬಿದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸಾವಿಗೆ ಕಾರಣ ಗೊತ್ತಾಗಿಲ್ಲ.
ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.