ADVERTISEMENT

ವಕ್ಫ್ ಬೋರ್ಡ್ ರದ್ದುಪಡಿಸಿ; ಬಿಜೆಪಿ ಮಂಡಲದ ವತಿಯಿಂದ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:36 IST
Last Updated 8 ನವೆಂಬರ್ 2024, 4:36 IST
 ವಕ್ಫ್ ಬೋರ್ಡ್ ರದ್ದುಪಡಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಹುಕ್ಕೇರಿ ತಹಶೀಲ್ದಾರ್ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು
 ವಕ್ಫ್ ಬೋರ್ಡ್ ರದ್ದುಪಡಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಹುಕ್ಕೇರಿ ತಹಶೀಲ್ದಾರ್ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು   

ಹುಕ್ಕೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವಕ್ಫ್ ಬೋರ್ಡ್ ಮೂಲಕ ಕಬಳಿಸುತ್ತಿರುವ ಜಮೀನು ಸೇರಿದಂತೆ ವಿವಿಧ ಆಸ್ತಿಗಳ ಕಬಳಿಕೆ ಯತ್ನ ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಕೋರ್ಟ್ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಂಜುಳಾ ನಾಯಿಕ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.‌

ಪ್ರತಿಭಟನೆ ಉದ್ದೇಶಿಸಿ ಬಿಜಿಪಿ ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿ, ‘ಕರ್ನಾಟಕದಲ್ಲಿ ವಕ್ಫ್ ಕಾಯ್ದೆಯ ದುರ್ಬಳಕೆಯಿಂದ ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್‌ನವರು ಮುಸ್ಲಿಂ ತುಷ್ಠಿಕರಣಕ್ಕಾಗಿ ಮತಗಳಿಕೆ ಆಸೆಯಿಂದ ರೂಪಿಸಲಾದ ವಕ್ಫ್ ಬೋರ್ಡ್‌ನ್ನು ರದ್ದುಪಡಿಸಬೇಕು’ ಎಂದರು.

ಮುಖಂಡರಾದ ಸತ್ಯಪ್ಪ ನಾಯಿಕ, ರಾಜು ಮುನ್ನೋಳಿ, ಗುರುರಾಜ ಕುಲಕರ್ಣಿ, ಪ್ರಭಾಕರ ಹಂಚಿನಾಳ, ರಾಹುಲ್ ಕೋರಿ, ರಾಜು ಬಿರಾದಾರ ಪಾಟೀಲ್, ಸುಚಿತ ಪಾಟೀಲ್, ಸಂಗಮೇಶ ದುರದುಂಡಿ, ದುರದುಂಡಿ ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.