ADVERTISEMENT

ಸಾಂಬ್ರಾ ವಿಮಾನ ನಿಲ್ದಾಣ: ಎಕೆ- 47ನಲ್ಲಿ ಬಳಸುವ ಜೀವಂತ ಗುಂಡು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 5:59 IST
Last Updated 13 ಸೆಪ್ಟೆಂಬರ್ 2020, 5:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಸೈನಿಕರೊಬ್ಬರ ಬಳಿ ಎಕೆ- 47ನಲ್ಲಿ ಬಳಸುವ ಒಂದು ಜೀವಂತ ಗುಂಡು ಹಾಗೂ ಬಳಸಿದ ಗುಂಡಿನ ಒಂದು ಕೇಸ್ (ಐಎನ್ಎಸ್ಎಎಸ್)ಪತ್ತೆಯಾಗಿದ್ದು, ಅವರನ್ನು ಹೆಚ್ಚಿನ‌ ವಿಚಾರಣೆಗಾಗಿ ಮರಾಠಾ ಲಘು ಪದಾತಿ ದಳದ (ಎಂಎಲ್ಐಆರ್ ಸಿ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

ಅವರನ್ನು ನಾಯಕ್ ಸುಬೇದಾರ್ ಅರುಣ್ ಮಾರುತಿ ಭೋಸಲೆ ಎಂದು ಗುರುತಿಸಲಾಗಿದೆ.

‘ಪರಿಶೀಲನೆ ವೇಳೆ ಗುಂಡು ಹಾಗೂ ಕೇಸ್ ಪತ್ತೆಯಾಗಿದೆ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಅವರು ರಜೆ ಮೇಲೆ ಊರಿಗೆ ಬಂದಿದ್ದರು. ರಜೆ ಮುಗಿಸಿ ಜಮ್ಮು ಕಾಶ್ಮೀರಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಶನಿವಾರ ತೆರಳುತ್ತಿದ್ದರು. ಅವರನ್ನು ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು ಪರಿಶೀಲನೆ ನಡೆಸುವಾಗ ಗುಂಡು ಹಾಗೂ ಕೇಸ್ ಸಿಕ್ಕಿದೆ. ಹೀಗಾಗಿ ಮುಂದಿನ ಕ್ರಮಕ್ಕಾಗಿ ಅವರನ್ನು ಎಂ ಎಲ್ ಐ ಆರ್ ಸಿಯವರಿಗೆ ಒಪ್ಪಿಸಲಾಗಿದೆ’ಎಂದು ಮಾರಿಹಾಳ ಠಾಣೆ ಇನ್ ಸ್ಪೆಕ್ಟರ್ ಬಿ.ಎಸ್. ಮಂಟೂರ್ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.