ADVERTISEMENT

ಬೆಳಗಾವಿ | ನೂರಾರು ದೇಗುಲಗಳ ಅಭಿವೃದ್ಧಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:13 IST
Last Updated 16 ಜೂನ್ 2024, 13:13 IST
ಅರಳೀಕಟ್ಟಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ಮಂದಿರದ ಸ್ಲ್ಯಾಬ್ ಕಾರ್ಯಕ್ರಮಕ್ಕ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು
ಅರಳೀಕಟ್ಟಿ ಗ್ರಾಮದಲ್ಲಿ ಭಾನುವಾರ ಬಸವೇಶ್ವರ ಮಂದಿರದ ಸ್ಲ್ಯಾಬ್ ಕಾರ್ಯಕ್ರಮಕ್ಕ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು   

ಹಿರೇಬಾಗೇವಾಡಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿಗೆ ಸಮೀಪದ ಅರಳೀಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರ ಮಂದಿರದ ಚಾವಣಿಗೆ ಭಾನುವಾರ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಈಗಾಗಲೇ ಹಲವು ದೇವಾಲಯಗಳ ಅಭಿವೃದ್ಧಿ ಮಾಡಿದ್ದು, ಜೊತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಹ ಮಾಡಲಾಗುತ್ತಿದೆ’ ಎಂದರು.

ADVERTISEMENT

ಇದೇ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು. ಅಣ್ಣಪ್ಪ ಪಾಟೀಲ, ಗುರಪ್ಪ ಹೆಬ್ಬಾಳಕರ, ಬಸವರಾಜ ಸತ್ತಿಗೇರಿ, ರುದ್ರಪ್ಪ ಉಪ್ಪಾರ, ರಮೇಶ ತಿಗಡಿ, ಸಿದ್ದಣ್ಣ ಸಿಂಗಾಡಿ, ರಾಜು ಉಪ್ಪಾರ, ಗೌಡಪ್ಪ ಪಾಟೀಲ, ನಾಗರಾಜ ಕರ್ಲಿಂಗನವರ, ಎನ್ ಸಿ ಬಾಗೇವಾಡಿ, ಚಂಬಣ್ಣ ಉಳ್ಳೆಗಡ್ಡಿ, ಅನಿಲ ಕರ್ಲಿಂಗನವರ, ಮಂಜು ಪಾರ್ವತಿ, ಅಡಿವೆಪ್ಪ ಕರ್ಲಿಂಗನವರ, ಈರಣ್ಣ ಮೂಲಿಮನಿ, ಗಂಗಯ್ಯ ಹಲಕರ್ಣಿಮಠ, ಶಂಕರ ಹರಿಜನ, ಪ್ರಕಾಶ್ ಎ, ಈರಪ್ಪ ದನದಮನಿ, ಈರಯ್ಯ ಪೂಜಾರಿ, ಈರಯ್ಯ ಮಠಪತಿ, ರುದ್ರಪ್ಪ ಕಟ್ಟಿಕಾರ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.