ADVERTISEMENT

ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರ ಸಮಾಧಿ ಮರಣ

ಅಂತಿಮ ದರ್ಶನ ಪಡೆದ ಸಹಸ್ರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:46 IST
Last Updated 21 ನವೆಂಬರ್ 2024, 14:46 IST
ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಸಕಲ ಪೂಜಾ ವಿಧಿ, ವಿಧಾನಗಳಿಂದ 108 ಜ್ಞಾನೇಶ್ವರ ಮುನಿ ಮಹಾರಾಜರ ಯಮ ಸಲ್ಲೇಖನ ಸಮಾಧಿ ಸ್ಮರಣೋತ್ಸವ ನೆರವೇರಿತು
ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಸಕಲ ಪೂಜಾ ವಿಧಿ, ವಿಧಾನಗಳಿಂದ 108 ಜ್ಞಾನೇಶ್ವರ ಮುನಿ ಮಹಾರಾಜರ ಯಮ ಸಲ್ಲೇಖನ ಸಮಾಧಿ ಸ್ಮರಣೋತ್ಸವ ನೆರವೇರಿತು   

ಬೈಲಹೊಂಗಲ: ಯಮಸಲ್ಲೇಖನ ವೃತ ಸ್ವೀಕರಿಸಿ ಸಮಾಧಿ ಮರಣ ಹೊಂದಿದ ತಾಲ್ಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಅತಿಷಯ ಕ್ಷೇತ್ರದ 108 ಜ್ಞಾನೇಶ್ವರ ಮುನಿ ಮಹಾರಾಜರ (86) ಅಂತಿಮ ದಹನ  ಜೈನ ಸಮುದಾಯದ ವಿಧಿ ವಿಧಾನಗಳ ಮೂಲಕ ಗುರುವಾರ ನೆರವೇರಿತು.

ಮುನಿಗಳು ಯಮ ಸಲ್ಲೇಖನ ಮರಣ ಹೊಂದಿದ ವಿಷಯ ತಿಳಿದು ರಾಜ್ಯ, ಹೊರ ರಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದ ಭಕ್ತರು, ಸಮಾಜದವರು ಕ್ಷೇತ್ರದ ಆವರಣದಲ್ಲಿ ಹಾಕಿದ್ದ ಮಂಟಪದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಾಲಿನಲ್ಲಿ ನಿಂತು ಮುನಿಗಳ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಮುನಿಗಳ ದೇಹದಹನ ಕಾರ್ಯ ಪಟ್ಟಾಚಾರ್ಯ ಆಚಾರ್ಯ 108 ವಿಮಲೇಶ್ವರ ಮುನಿ ಮಹಾರಾಜರ, 105 ಗಣನಿ ಆರ್ಯಿಕಾ ಜಿನವಾನಿ ಮಾತಾಜಿ, ಕ್ಷುಲ್ಲಿಕಾ 105 ವಿಶುದ್ದಮತಿ ಮಾತಾಜಿ, ಕ್ಷುಲ್ಲಿಕಾ 105 ಅಮೃತ ಜ್ಯೋತಿ ಮಾತಾಜಿ, ಕ್ಷುಲ್ಲಿಕಾ 105 ಅಚಲಜ್ಯೋತಿ ಮಾತಾಜಿ ನೇತೃತ್ವದಲ್ಲಿ ನಡೆಯಿತು.

ADVERTISEMENT

ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು. ಅವರ ದೇಹ ದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು. ಮುನಿಗಳ ಪಾರ್ಥಿವ ಶರೀರಕ್ಕೆ ಮುನಿಗಳು ಮತ್ತು ಮಾತಾಜಿಯವರು ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಲ್ಲೇಖನ ಕಮಿಟಿಯ ಜಿನಪ್ಪ ಮಲ್ಲಾಡಿ, ಸಂತೋಷ ನಾಗನೂರ, ಉದಯ ಬೆಳಗಾವಿ, ಸಂತೋಷ ಬೆಳಗಾವಿ, ಅನೀಲ ಮೇಕಲಮರಡಿ, ಅನಂತ ಮರೆಣ್ಣವರ, ಶಾಂತಿನಾಥ ಚೌಗಳೆ, ಪದ್ಮರಾಜ ಇಂಚಲ ಸೇರಿದಂತೆ ಅನೇಕರು ಇದ್ದರು.

ಬೈಲಹೊಂಗಲ ತಾಲ್ಲೂಕಿನ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ನಡೆದ 108 ಜ್ಞಾನೇಶ್ವರ ಮುನಿ ಮಹಾರಾಜರ ಅಂತಿಮ ಕ್ರಿಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು

Highlights - *ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ಧ ಭಕ್ತರು *ಸಹಸ್ರಾರು ಭಕ್ತರಿಂದ ಮುನಿಗಳ ಅಂತಿಮ ದರ್ಶನ *ಸಕಲ ಪೂಜಾ ವಿಧಿ, ವಿಧಾನಗಳಿಂದ ಅಂತ್ಯಕ್ರೀಯೆ ***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.