ADVERTISEMENT

ನಾಡ ಕಚೇರಿಯಲ್ಲಿ ಏಜೆಂಟರ್  ಹಾವಳಿ ತಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:21 IST
Last Updated 26 ಜೂನ್ 2024, 5:21 IST
ಮೂಡಲಗಿ ತಾಲ್ಲೂಕಿನ ಅರಭಾವಿಯ ನಾಡಕಚೇರಿಯಲ್ಲಿ ಖಾಸಗಿ ಏಜೆಂಟರ ಹಾವಳಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರುನಾಡು ರಕ್ಷಣಾ ವೇದಿಕೆಯವರು ತಹಶೀಲ್ದಾರ್ ಮಹಾದೇವ ಸನಮೂರಿ ಅವರಿಗೆ ಮನವಿ ಅರ್ಪಿಸಿದರು
ಮೂಡಲಗಿ ತಾಲ್ಲೂಕಿನ ಅರಭಾವಿಯ ನಾಡಕಚೇರಿಯಲ್ಲಿ ಖಾಸಗಿ ಏಜೆಂಟರ ಹಾವಳಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರುನಾಡು ರಕ್ಷಣಾ ವೇದಿಕೆಯವರು ತಹಶೀಲ್ದಾರ್ ಮಹಾದೇವ ಸನಮೂರಿ ಅವರಿಗೆ ಮನವಿ ಅರ್ಪಿಸಿದರು    

ಮೂಡಲಗಿ: ಅರಭಾವಿಯ ನಾಡಕಚೇರಿಗೆ ಬರುವ ಸಾರ್ವಜನಿಕರಿಗೆ ಏಜೆಂಟರು ಕಿರುಕಿಳು ನೀಡುತ್ತಿದ್ದಾರೆ ಮತ್ತು ಖಾಸಗಿ ಸಿಬ್ಬಂದಿಯವರ ಹಾವಳಿ ಅಧಿಕವಾಗಿದೆ. ಹಣ ನೀಡಿದರೆ ಮಾತ್ರ ಕೆಲಸ ಮಾಡಿಕೊಡುವರು ಇದು ನಿಲ್ಲಬೇಕು ಎಂದು ಕರುನಾಡು ರಕ್ಷಣಾ ವೇದಿಕೆಯವರು ಮಂಗಳವಾರ ಮೂಡಲಗಿ ತಹಶೀಲ್ದಾರ್‌ ಅವರಿಗೆ ಮನವಿ ನೀಡಿರುವರು.

ನಾಡಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಸಿಬ್ಬಂದಿಯವರು ಸಾರ್ವಜನಿಕರಿಗೆ ಅಸಭ್ಯವಾಗಿ ವರ್ತಿಸುತ್ತಿರುವರು. ಏಜೆಂಟರು ಕಚೇರಿಗೆ ಪ್ರವೇಶವನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವೇದಿಕೆಯ ರಾಜ್ಯಾಧ್ಯಕ್ಷ ಮಲಿಕಾರ್ಜುನ ಮರಕುಂಬಿ, ಜಿಲ್ಲಾಧ್ಯಕ್ಷ ಸಿದ್ದು ಕಂಕಣವಾಡಿ ಅವರ ನೇತೃತ್ವದಲ್ಲಿ ಮನವಿ ನೀಡಿದರು.

ADVERTISEMENT

ವೇದಿಕೆಯ ಸದಸ್ಯರಾದ ಗೋಪಾಲ ಗೋಪಾಳಿ, ಲಕ್ಷ್ಮಣ ಪೂಜೇರಿ, ಬಸು ಮಲ್ಹಾರಿ, ವಿಠಲ ಪೂಜೇರಿ, ಆನಂದ ಕೋಳಿ, ಮುತ್ತಪ್ಪ ಪೂಜೇರಿ, ಹಣಮಂತ ಕಳ್ಯಾಗೋಳ, ಹಾಲಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ, ಬಸವರಾಜ ಪೂಜೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.