ADVERTISEMENT

ರಾಮದುರ್ಗ: ರಾಜ್ಯ ನೌಕರರ ಸಂಘದ ಚುನಾವಣೆ; ಪವಾಡಿಗೌಡ್ರ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 12:59 IST
Last Updated 16 ನವೆಂಬರ್ 2024, 12:59 IST
ರಾಮದುರ್ಗ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಈರನಗೌಡ ಪವಾಡಿಗೌಡ್ರ ವಿಜೇತರಾದರು. ನೌಕರರ ಸಂಘದ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು
ರಾಮದುರ್ಗ ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಈರನಗೌಡ ಪವಾಡಿಗೌಡ್ರ ವಿಜೇತರಾದರು. ನೌಕರರ ಸಂಘದ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು   

ರಾಮದುರ್ಗ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಈರನಗೌಡ ವೈ. ಪವಾಡಿಗೌಡ್ರ ಪುನರಾಯ್ಕೆಯಾಗಿದ್ದಾರೆ.

ಒಟ್ಟು 33 ಮತಗಳಲ್ಲಿ ಕಂದಾಯ ಇಲಾಖೆಯ ಈರನಗೌಡ ಪವಾಡಿಗೌಡ್ರ 31 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಇವರ ಪ್ರತಿಸ್ಪರ್ಧಿ ಶಿಕ್ಷಣ ಇಲಾಖೆಯ ರಮೇಶ ಬಸಪ್ಪ ಅಣ್ಣಿಗೇರಿ ಕೇವಲ 2 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಮಂಜುನಾಥ ಶಿ. ಪರಪ್ಪನವರ, ಖಜಾಂಚಿಯಾಗಿ ಪದವಿಪೂರ್ವ ಕಾಲೇಜಿನ ಬಿ.ಬಿ. ಹರನಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ನೂತನ ಕಾರ್ಯದರ್ಶಿಯಾಗಿ ಪ್ರೌಢಶಾಲೆಯ ಎಂ.ಎಸ್.ಜಂಗವಾಡ, ಗೌರವಾಧ್ಯಕ್ಷರಾಗಿ ಕೃಷಿ ಇಲಾಖೆಯ ಎ.ಬಿ.ವಾಲಿಕಾರ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಯಿತು.

ಜಿ.ವಿ. ಪಾಟೀಲ (ಪಶುಸಂಗೋಪನೆ), ತಿಮ್ಮಣ್ಣ ಲ. ಪಾಟೀಲ, ಲೋಕೇಶ ರಾ. ಚವ್ಹಾಣ (ಕಂದಾಯ ಇಲಾಖೆ), ಸಿದ್ಧಯ್ಯ ರು. ಗುಡಿ (ನೀರಾವರಿ,) ಗಂಗವ್ವ ಮ. ಪಾಟೀಲ, ವಿ. ಎ. ಮುಗಳಿ, ರಮೇಶ ಬ. ಅಣ್ಣಿಗೇರಿ (ಪ್ರಾಥಮಿಕ ಶಾಲೆ,) ಅಶೋಕ ಮ. ಮದಕಟ್ಟಿ(ಬಿಇಓ ಕಛೇರಿ), ಸುನಂದಾ ಎಂ. ವಾಲಿ, ವಸಂತ ಎಲ್. ಚಿನಿವಾಲರ (ಸಮಾಜಕಲ್ಯಾಣ,) ಚನ್ನಬಸಪ್ಪ ಶಿ. ಬಿರಾದಾರ (ಬಿಸಿಎಂ,) ಬಸಪ್ಪ ಕೆ. ಗಡ್ಡೆನ್ನವರ (ಅರಣ್ಯ ಇಲಾಖೆ,) ರಾಯಪ್ಪ ಚಂ. ಅವರಾದಿ, ರವಿ ಅ. ಸತಾರಿ, ಬಿ. ಜಿ. ಉಣಕಲ್ (ಆರೋಗ್ಯ ಇಲಾಖೆ), ಮಕ್ತುಮಸಾಬ ಕ. ಹಂಪಿಹೋಳಿ (ತೋಟಗಾರಿಕೆ), ಸಂತೋಷ ಭಜಂತ್ರಿ (ಉಪಖಜಾನೆ), ಸುರೇಶ ಗಿ. ಮಡಿವಾಳರ (ಭೂಮಾಪನ), ಲಕ್ಕಪ್ಪ ಪ. ದೇವಕ್ಕನವರ (ನ್ಯಾಯಾಂಗ), ಅಶೋಕ ದು. ಹುಣಶಿಕಟ್ಟಿ, ಶ್ರೀಕಾಂತ ಗುರ್ಲಹೊಸೂರು(ತಾಪಂ), ಮಾಧುರಿ ಮಡಿವಾಳರ (ಸಿಡಿಪಿಓ), ಕಾಶಿಬಾಯಿ ಗು. ಗೊಣ್ಯಾಗೋಳ (ಮೀನುಗಾರಿಕೆ), ಶಿವಾನಂದ ಜಿ. ಮಠ (ಎಪಿಎಂಸಿ), ಸಂಜೀವ ಹಮ್ಮನ್ನವರ (ಆಹಾರ), ನಿಂಗಪ್ಪ ದುಂಡಾನಟ್ಟಿ (ಅಬಕಾರಿ), ಶಿವಕುಮಾರ ಅಂಗಡಿ(ಐಟಿಐ), ಶಶಿಕಾಂತ ಅ. ಕಾಂಬಳೆ (ಗುಣನಿಯಂತ್ರಣ) ನಿದೇರ್ಶಕರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆಯ ಎ.ಎಸ್.ತಹಶೀಲ್ದಾರ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಸ್.ಆರ್.ಹುರಕಡ್ಲಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.