ADVERTISEMENT

ಬೆಳಗಾವಿ | ಲೋಕಾಯುಕ್ತ ಬಲೆಗೆ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 15:54 IST
Last Updated 5 ಮಾರ್ಚ್ 2024, 15:54 IST
ಪಂಡಿತ ವಾಘ
ಪಂಡಿತ ವಾಘ   

ರಾಯಬಾಗ(ಬೆಳಗಾವಿ ಜಿಲ್ಲೆ): ಇಲ್ಲಿನ ಪಂಚಾಯತ್‌ರಾಜ್‌ ಮತ್ತು ಎಂಜಿನಿಯರಿಂಗ್‌ ಉಪವಿಭಾಗದ ರಾಯಬಾಗ ಕಿರಿಯ ಎಂಜಿನಿಯರ್‌ ಪಂಡಿತ ವಾಘ ಅವರನ್ನು ಗುತ್ತಿಗೆದಾರ ಮುತ್ತಪ್ಪ ಭಜಂತ್ರಿ ಅವರಿಂದ ₹12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಮುಗಳಖೋಡದ ಖೇತಗೌಡರ ತೋಟದ ಸರ್ಕಾರಿ ಶಾಲೆಯ ಶೌಚಗೃಹ ನಿರ್ಮಾಣ ಕಾಮಗಾರಿಯ ₹3 ಲಕ್ಷ ಬಿಲ್ ಪಾವತಿಗೆ ಎಂಜಿನಿಯರ್ ಲಂಚ ಕೇಳಿದ್ದರು. ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ಭರತ ರೆಡ್ಡಿ, ಇನ್‌ಸ್ಪೆಕ್ಟರ್‌ಗಳಾದ ನಿರಂಜನ ಪಾಟೀಲ, ಯು.ಎಸ್‌.ಅವಟಿ, ರವಿಕುಮಾರ ಧರ್ಮಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.