ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹುಲಿಕೊತ್ತಲ ಎನ್ನುವ ಕಾಡಂಚಿನ ಗ್ರಾಮದ ಯುವಕ ಫಕ್ಕೀರಪ್ಪ ಹರಿಜನ. ಕಾಳ್ಗತ್ತಲ ಬದುಕಿನಿಂದ ಎದ್ದುಬಂದ ಅವರೀಗ ಹಲವರಿಗೆ ಬೆಳಕು. ಅಂಗವಿಕಲರು, ಹಳ್ಳಿಗಾಡಿನ ಹೆಣ್ಣುಮಕ್ಕಳು, ಶೋಷಿತರು, ಅಸಹಾಯಕರಿಗೆ ಊರುಗೋಲು. ‘ಪಾಪ ಮಾಡಿ ಹುಟ್ಟಿದವರು’ ಎಂದು ಯಾರೋ ಅಣಕಿಸಿದ ಮಾತು ಅವರು ಕತ್ತಲಕೋಣೆ ಸೇರುವಂತೆ ಮಾಡಿತ್ತು. ಆಗ, ತೆರೆದುಕೊಂಡಿದ್ದೇ ‘ಜಾಗೃತಿ’ ಎನ್ನುವ ಬೆಳಕಿನ ಗವಾಕ್ಷಿ. ಈ ‘ಜಾಗೃತಿ’ಯನ್ನೇ ವೇದಿಕೆ ಮಾಡಿಕೊಂಡು ಕೆಲಸ ಮಾಡುತ್ತಿರುವ ಫಕ್ಕೀರಪ್ಪ ಅವರ ಪ್ರೇರಣಾದಾಯಕ ಪಯಣವೇ ಈ ವಿಡಿಯೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.