ಬೆಳಗಾವಿ: ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಮತ್ತು ಕಿಸಾನ್ ಗೋಷ್ಠಿಯನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಹುಕ್ಕೇರಿ ತಾಲ್ಲೂಕು ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್. ನೂಲಿ ಉದ್ಘಾಟಿಸಿದರು. ‘ಕಬ್ಬಿನ ಬೇಸಾಯದಲ್ಲಿ ಇತ್ತೀಚಿನ ಬೆಳವಣಿಗೆಗಳು ಹಾಗೂ ಅಧಿಕ ಇಳುವರಿಯ ತಾಂತ್ರಿಕತೆಗಳ’ ವಿಷಯ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಅಧಿಕಾರಿ ಮನೋಹರಗೌಡ ಎಸ್. ಅವರು ರೈತರ ದಿನದ ಔಚಿತ್ಯವನ್ನು ತಿಳಿಸಿದರು.
ತಾಲ್ಲೂಕಿನ ಎಂಟು ಸಾಧಕ ರೈತರು ಮತ್ತು ರೈತ ಮಹಿಳೆಯನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ಮಂಗಳಾ ಬಿರಾದಾರ, ಸಹಾಯಕ ತೋಟಗಾರಿಕಾ ಅಧಿಕಾರಿ ಪಟ್ಟಣಶೆಟ್ಟಿ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಎಂ.ಸಿ. ಮಠದ, ಸಹಾಯಕ ತಾಂತ್ರಿಕ ವ್ಯವಸ್ಧಾಪಕ ಮಂಜುನಾಥ ಹಕ್ಕಲದವರ, ರೈತರಾದ ಬಸವರಾಜ ಡೊಂಗರಗಾವಿ, ಪಿರಾಜಿ ಮಾಹುತ, ರಮೇಶ ವಾಲಿ, ಸಂಜೀವ ಡೊಂಗರಗಾವಿ ಪಾಲ್ಗೊಂಡಿದ್ದರು.
ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಸವಿತಾ ಪರೀಟ ನಿರೂಪಿಸಿದರು. ಮಲ್ಲೇಶ ನಾಯಿಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.