ADVERTISEMENT

ಪ್ರವಾಹ ಎದುರಿಸಲು ಸಿದ್ಧತೆ ಇರಲಿ

ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ರಾಜು ಕಾಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:22 IST
Last Updated 26 ಜೂನ್ 2024, 5:22 IST
ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ‌ ಕೆಡಿಪಿ‌ ಸಭೆಯಲ್ಲಿ ಶಾಸಕ ರಾಜು ಕಾಗೆ ಮಾತನಾಡಿದರು
ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ‌ ಕೆಡಿಪಿ‌ ಸಭೆಯಲ್ಲಿ ಶಾಸಕ ರಾಜು ಕಾಗೆ ಮಾತನಾಡಿದರು   

ಕಾಗವಾಡ:  ಪ್ರವಾಹ ಸಮಯದಲ್ಲಿ ಜನ ಜಾನುವಾರುಗಳಿಗೆ ತೊಂದರೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹಾಗೂ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಸೂಚನೆ ನೀಡಿದರು.

ಕಾಗವಾಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರವಾಹ ನಿಯಂತ್ರಣಕ್ಕೆ ಸಿದ್ದತೆ‌ ಮಾಡಿಕೊಳ್ಳಬೇಕು.  ದೋಣಿಗಳನ್ನು ಸುಸ್ಥಿತಿಯಲ್ಲಿಡಬೇಕು. ಕಾಳಜಿ ಕೇಂದ್ರ ಗುರುತಿಸಿ ಅಗತ್ಯ ಸೌಲಭ್ಯ ಮಾಡಿ ಕೊಳ್ಳಬೇಕು. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಮಳೆಗಾಲ ಪ್ರಾರಂಭವಾಗಿದ್ದು ಅಗತ್ಯ ಬೀಜ ರಸಗೊಬ್ಬರ ದಾಸ್ತಾನು ಇಟ್ಟು ರೈತರಿಗೆ ಸಕಾಲದಲ್ಲಿ ಪೂರೈಕೆ ಆಗುವಂತೆ ನಿಗಾವಹಿಸಬೇಕು ಎಂದು ಕೃಷಿ ಇಲಾಖೆ‌ ಅಧಿಕಾರಿಗಳಿಗೆ ಸೂಚಿಸಿದರು.

ಬಸವೇಶ್ವರ ಯಾತ ನೀರಾವರಿ ಯೋಜನೆ ಪ್ರಾರಂಭ ಮಾಡುವ ಯೋಜನೆ ಇದೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನೀರಾವರಿ ಇಲಾಖೆ ಎಇಇ ಕೆ ರವಿ ಹಾಗೂ ಹೆಸ್ಕಾಂ ಎಇಇ ದುರ್ಯೋಧನ ಮಾಳಿ ಅವರಿಗೆ ಸೂಚನೆ ನೀಡಿದರು.

ತಹಶೀಲ್ದಾರ ರಾಜೇಶ ಬುರ್ಲಿ, ಇಒ ಈರಣ್ಣ ವಾಲಿ, ಎಂ‌ ಆರ್ ಮುಂಜೆ, ಸಂಜೀವಕುಮಾರ ಸದಲಗಿ, ಡಿ.ಜೆ.ಕಾಂಬಳೆ, ಮಾಹಾಂತೇಶ ಕವಲಾಪೂರ, ಜಯಾನಂದ‌ ಹಿರೇಮಠ, ಮಾಹಾಂತೇಶ ಭಂಡಗರ, ಪ್ರಶಾಂತ ಗಾಣಿಗೇರ, ನಿಂಗನಗೌಡ ಬಿರಾದಾರ, ಎ.ಡಿ.ಅನ್ಸಾರಿ, ಕೆ.ರವಿ, ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಧಿಕಾರಿಗೆ ಮಾಹಿತಿ ಕೊರತೆ:

ತರಾಟೆ  ಜಲ ಜೀವನ ಮಷಿನ್ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದ ಅಥಣಿ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ರವೀಂದ್ರ ಮೂರಗಾಲಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬರುತ್ತಿರಾ ಎಂದು ಕೇಳಿದರು. ‘ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ‌ ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಇನ್ನೊಮ್ಮೆ ಇಂತಹ ಘಟನೆಯಾಗಂದೆ ನಿಗಾ ವಹಿಸಬೇಕು. ಪ್ರತಿ ಹಳ್ಳಿಗೂ ತೆರಳಿ ಜಲ ಜೀವನ ಮಷಿನ್ ಕಾಮಗಾರಿ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.