ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ತಯಾರಿ ನಡೆಸಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಭಾಕರ ಕೋರೆ ಅವರು ‘ಇನ್ನೂ ಅಂಥ ವಿಚಾರ ಮಾಡಿಲ್ಲ’ ಎಂದಿದ್ದಾರೆ.
‘ನಾನು ಕಾಂಗ್ರೆಸ್ ಸೇರುವುದಾದರೆ ನಿಮಗೆಲ್ಲ ತಿಳಿಸುತ್ತೇನೆ. ನನಗೀಗ 75 ವರ್ಷ ತುಂಬಿದೆ. ಈ ವಯಸ್ಸಿನಲ್ಲಿ ಬೇರೆ ಪಕ್ಷ ಸೇರುವುದು ಮತ್ತೊಂದು ಮದುವೆ ಮಾಡಿಕೊಂಡ ಹಾಗಾಗುತ್ತದೆ’ ಎಂದೂ ಹಾಸ್ಯ ಚಟಾಕಿ ಹಾರಿಸಿದರು.
‘ಬಿಜೆಪಿಯಲ್ಲಿ ಜಗದೀಶ ಶೆಟ್ಟರ ಅವರಿಗೆ ಆದ ಅನ್ಯಾಯದಿಂದ ಬಹಳ ನೋವಾಗಿದೆ. ಯಡಿಯೂರಪ್ಪ, ಅನಂತಕುಮಾರ ಹಾಗೂ ಶೆಟ್ಟರ್ ಸೇರಿಕೊಂಡು ರಾಜ್ಯದಲ್ಲಿ ಪಕ್ಷ ಕಟ್ಟಿದವರು. ಅವರನ್ನು ಕಡೆಗಣಿಸಬಾರದಿತ್ತು. ಈಗಲೂ ನಾನು ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ. ಶೆಟ್ಟರ ಕೈಬಿಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಶೆಟ್ಟರ ಮತ್ತು ನನ್ನ ಮಧ್ಯೆ ಅವಿನಾಭಾವ ಸಂಬಂಧವಿದೆ. ಅವರನ್ನು ಭೇಟಿ ಮಾಡುತ್ತೇನೆ’ ಎಂದೂ ಹೇಳಿದರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.