ಹುಕ್ಕೇರಿ: ಗಣೇಶ ಚತುರ್ಥಿ ಹಿಂದೂಗಳ ಪ್ರಮುಖ ರಾಷ್ಟ್ರೀಯ ಹಬ್ಬ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಲೇಬರ್ ಕ್ಯಾಂಪ್‌ನಲ್ಲಿ ಗಣೇಶ ಚತುರ್ಥಿ ಅಂಗವಾಗಿ ಆಯೋಜಿಸಿದ್ದ ಸಮೂಹ ನೃತ್ಯ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಯುವಕರು, ಗ್ರಾಮಸ್ಥರು ಕೂಡಿ ಕಳೆದ 3 ವರ್ಷದಿಂದ ವಿಶಿಷ್ಟವಾಗಿ ಗಣೇಶ ಚತುರ್ಥಿ ಆಚರಿಸುತ್ತಿದ್ದೀರಿ. ಈ ಸಲ ₹2.10 ಲಕ್ಷ ವೆಚ್ಚದಲ್ಲಿ 31 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ರಾಜ್ಯದ ಜನರ ಮನ ಸೆಳೆಯುವಂತೆ ಮಾಡಿದ್ದೀರಿ. ಈ ಪರಂಪರೆ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿದರು.
ಸಮೂಹ ನೃತ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಿಪಿಐ ರಮೇಶ ಛಾಯಾಗೋಳ, ಘೋಡಗೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಮುಗಳಿ, ಸಂತೋಷ ನಾಯಕ, ಗಣೇಶ ಉತ್ಸವ ಮಂಡಳಿ ಅಧ್ಯಕ್ಷ ರವಿ ಬೆಣ್ಣಿ, ರಂದೂಲ್ ಖಾನ್ ಬಳೆಗಾರ, ಹೊಸಪೇಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಹಾಸಿನಿ ಮಗದುಮ್ಮ,ಮಾಜಿ ಅಧ್ಯಕ್ಷ ಬಸವರಾಜ ಚಿಕ್ಕೋಡಿ, ಸದಸ್ಯರಾದ ಭಾರತಿ ಬೆಣ್ಣಿ ಸೇರಿ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.