ADVERTISEMENT

ಎಂ.ಕೆ.ಹುಬ್ಬಳ್ಳಿ: ಕುಂಭಮೇಳದೊಂದಿಗೆ ಗಣೇಶೋತ್ಸವ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:42 IST
Last Updated 8 ಸೆಪ್ಟೆಂಬರ್ 2024, 13:42 IST
ಎಂ.ಕೆ.ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪೇಟೆ ಓಣಿಯ 50ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮೆರವಣಿಗೆ ಗಮನ ಸೆಳೆಯಿತು
ಎಂ.ಕೆ.ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಪೇಟೆ ಓಣಿಯ 50ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮೆರವಣಿಗೆ ಗಮನ ಸೆಳೆಯಿತು   

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಶನಿವಾರ ಸಂಭ್ರಮದಿಂದ ಗಣೇಶೋತ್ಸವ ಪ್ರತಿಷ್ಠಾಪಣಾ ಮೆರವಣಿಗೆ ನಡೆಯಿತು.

ಮನೆ ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ ಪಟ್ಟಣದ ಜನರು, ಸಂಜೆ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಪಟ್ಟಣದಲ್ಲಿ ಸುಮಾರು 20ಕ್ಕೂ ಅಧಿಕ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. 

ADVERTISEMENT

ಗಮನ ಸೆಳೆದ 50ನೇ ವರ್ಷದ ಗಣೇಶೋತ್ಸವ ಸಂಭ್ರಮ: ಪಟ್ಟಣದ ಪೇಟೆ ಓಣಿಯ ಗಣೇಶೋತ್ಸವಕ್ಕೆ 50ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣಿಗೆ ಗಮನ ಸೆಳೆಯಿತು. ಎತ್ತರದ ಗಣೇಶ ಮೂರ್ತಿಯ ಮುಂದೆ ಕುಂಭ ಮತ್ತು ಆರತಿ ಹಿಡಿದು ಮಹಿಳೆಯರು ಸಾಲುಗಟ್ಟಿ ಸಾಗಿದರು. ಪಾರಂಪರಿಕ ಕಲೆಗಳ ಪ್ರದರ್ಶನದ ಜೊತೆಗೆ ಜಾಝ್ ಪಥಕ ಮತ್ತು ಭಕ್ತಿಗೀತೆಗಳು ಮೊಳಗಿದವು. ಮೆರವಣಿಗೆ ಮಾರ್ಗದುದ್ದಕ್ಕೂ ಯುವಪಡೆ ಕುಣಿದು ಕುಪ್ಪಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.