ಮೂಡಲಗಿ: ‘ಶಿಕ್ಷಣಕ್ಕಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಭಗೀರಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಎಲ್. ಬಬಲಿ ಹೇಳಿದರು.
ಸಮೀಪದ ನಾಗನೂರ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಹಾಗೂ ಪಟ್ಟಣ ಪಂಚಾಯ್ತಿಯಿಂದ ವಸತಿ ನಿಲಯಕ್ಕೆ ಕಸ ಸಂಗ್ರಹಿಸುವ ಡಬ್ಬಿಗಳ ವಿತರಣಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ದಲಿತ ಮುಖಂಡ ಸತ್ಯಪ್ಪ ಕರವಡೆ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮುಗಿಸಿದವರು ಉನ್ನತ ಸ್ಥಾನಕ್ಕೆರಿದ್ದಾರೆ’ ಎಂದರು.
ಪ್ರಾಚಾರ್ಯ ಕೆ.ಎಸ್. ಮಾರಾಪುರ ಪ್ರಾಸ್ತಾವಿಕ ಮಾತನಾಡಿದರು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಆರ್. ಕಮತೆ, ವೈ.ಆರ್. ಕರಬನ್ನವರ, ಪಟ್ಟಣ ಪಂಚಾಯ್ತಿ ಸದಸ್ಯ ಬಿ.ಎಸ್. ಹೊಸಮನಿ, ಮಾರುತಿ ಕರಬನ್ನವರ, ಶಂಕರ ದಳವಾಯಿ, ದುಂಡಪ್ಪ ಪಡದಲ್ಲಿ, ಮುತ್ತಪ್ಪ ಮುತ್ತನ್ನವರ, ಸಿದ್ದಪ್ಪ ಗೋಟೂರ, ಶಿವಾಜಿ ಯಡ್ರಾಂವಿ ಇದ್ದರು.
ವಿ.ವಿ. ಮಲಾರಡಿ, ಆರ್.ಎಂ. ನದಾಫ ನಿರೂಪಿಸಿದರು, ಎಸ್.ಕೆ. ದಂಡಿನ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.