ADVERTISEMENT

‘ಹಿಂದೂ ರಾಷ್ಟ್ರದ ಕನಸು ಕಾಣುವುದು ಬಿಡಿ’: ಭಾರತ ನಕ್ಷೆಯಲ್ಲಿ ಪ್ರಚೋದನಕಾರಿ ಬರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 21:31 IST
Last Updated 20 ಫೆಬ್ರುವರಿ 2024, 21:31 IST
<div class="paragraphs"><p>ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್‌</p></div>

ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್‌

   

ಗೋಕಾಕ (ಬೆಳಗಾವಿ ಜಿಲ್ಲೆ): ‘ಗೋಕಾಕ ಮುಸ್ಲಿಂ’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಭಾರತ ನಕ್ಷೆಗೆ ಅವಮಾನ ಮಾಡಲಾಗಿದೆ. ಮತೀಯ ಗಲಭೆ ಉಂಟುಮಾಡುವಂಥ ಬರಹ ಬರೆದು ವಿಡಿಯೊ ಹರಿಬಿಡಲಾಗಿದೆ ಎಂದು ಶಹರ ಪೊಲೀಸ್‌ ಠಾಣೆಯಲ್ಲಿ  ಮಂಗಳವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಈ ಸಾಮಾಜಿಕ ಜಾಲತಾಣದ ಪುಟದಲ್ಲಿ ಅಕ್ಕಪಕ್ಕ ಎರಡು ಭಾರತ ನಕ್ಷೆ ಬಿಡಿಸಿದ ಪಟವಿದೆ. ಒಂದಕ್ಕೆ ಕೇಸರಿ ಬಣ್ಣ ತುಂಬಿ, ಅದರಲ್ಲಿ ‘ಹಿಂದೂ ರಾಷ್ಟ್ರದ ಕನಸು ಕಾಣುವುದು ಬಿಡಿ’ ಎಂದು ಅಶ್ಲೀಲ ಪದ ಬಳಸಲಾಗಿದೆ. ಇನ್ನೊಂದು ಪಟದಲ್ಲಿ ಹಸಿರು ಬಣ್ಣ ತುಂಬಿ ‘ಅಲ್ಲಾಹು ಅಕ್ಬರ್‌. ಹಮಾರಿ ಹುಕೂಮತ್‌ ರಹೇಗಿ ಇನ್ಷಾಅಲ್ಲಾಹ್‌ (ದೇವರ ಇಚ್ಚೆಯಂತೆ ನಮ್ಮ ಆಡಳಿತವೇ ಇರಲಿದೆ)’ ಎಂದು ಬರೆಯಲಾಗಿದೆ. ಇದರ ವಿಡಿಯೊ ಮಾಡಿ ಹರಿಬಿಡಲಾಗಿದೆ’ ಎಂದು ಎಫ್ಐಆರ್‌ನಲ್ಲಿ ಬರೆಯಲಾಗಿದೆ.

ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ವಿಡಿಯೊ ನೋಡಿದ ಕೆಲವರು ಗೋಕಾಕ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇನ್‌ಸ್ಟಾಗ್ರಾಂ ಪೇಜ್‌ ಮೇಲೆ ಪ್ರಕರಣ ದಾಖಲಿಸಿದರು. ಮತೀಯ ಗಲಭೆ, ದಂಗೆ, ಸಾಮಾಜಿಕ ಶಾಂತಿ ಕದಡುವ ಉದ್ದೇಶದಿಂದ ಈ ಪೋಸ್ಟ್‌ ಮಾಡಲಾಗಿದೆ ಎಂದು ಎಫ್‌ಐಆರ್‌ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.