ADVERTISEMENT

ಹಣಮಂತ ದೇವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:21 IST
Last Updated 26 ಜೂನ್ 2024, 5:21 IST

ಬೈಲಹೊಂಗಲ: ಪಟ್ಟಣದ ದೊಡ್ಡ ಕೆರೆ ಪಕ್ಕದ ಹಣಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಜೂನ್‌ 27ರಿಂದ ಜು.1ರವರೆಗೆ ಅದ್ಧೂರಿಯಿಂದ ನೆರವೇರಲಿದೆ.

ಜೂ.27ರಂದು ರಥದ ಕಳಸಾರೋಹಣ. ಜೂ.28ರಂದು ರಾತ್ರಿ 9ಕ್ಕೆ ಭಜನೆ. ಜೂ.29ರಂದು ಬೆಳಗ್ಗೆ 6ಕ್ಕೆ ರುದ್ರಾಭಿಷೇಕ.ಬೆಳಗ್ಗೆ 8ಕ್ಕೆ ವಸ್ತ್ರಾಭರಣ. ಅಲಂಕಾರ ಸೇವೆ. ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ನೆರವೇರಲಿದೆ.

ಸಂಜೆ 4ಕ್ಕೆ ಮಹಾರಥೋತ್ಸವ ನೆರವೇರಲಿದೆ. ಜೂ.30ರಂದು ಬೆಳಗ್ಗೆ 6ಕ್ಕೆ ಅಭಿಷೇಕ, ಕುಂಕುಮಾರ್ಚಣೆ, ಅಲಂಕಾರ ಸೇವೆ, ಮಧ್ಯಾಹ್ನ 4ಕ್ಕೆ ಕುಸ್ತಿ ಪಂದ್ಯಾವಳಿ ನೆರವೇರಲಿವೆ.

ADVERTISEMENT

ಜು.1ರಂದು ಬೆಳಗ್ಗೆ 6ಕ್ಕೆ ಅಭಿಷೇಕ, ಬುತ್ತಿ ಪೂಜೆ, ಕುಸ್ತಿ ಪಂದ್ಯಾವಳಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.