ಚನ್ನಮ್ಮನ ಕಿತ್ತೂರು: ಹೋಳಿ ಹಬ್ಬದ ಪ್ರಯುಕ್ತ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯುವಕ–ಯುವತಿಯರು, ಮಕ್ಕಳು ಶಾಂತಿ ಮತ್ತು ಸಂಭ್ರಮದಿಂದ ಮಂಗಳವಾರ ಬಣ್ಣದಾಟ ಆಡಿದರು.
ಕೈಯಲ್ಲಿ ಬಣ್ಣದ ಪೊಟ್ಟಣ, ಬಣ್ಣದ ನೀರಿನ ಬಾಟಲಿ ಹಿಡಿದು ಮುಂಜಾನೆಯೇ ಬಣ್ಣದಾಟಕ್ಕೆ ಬಾಲಕರು ಮುನ್ನುಡಿ ಬರೆದರು. ಅನಂತರ ಯುವಕರು ರಸ್ತೆಗೆ ಬಣ್ಣದಾಟಕ್ಕೆ ಇಳಿದರು. ಬಾಲಕಿಯರು, ಯುವತಿಯರೂ ಪರಸ್ಪರ ಬಣ್ಣವನ್ನು ಮುಖಕ್ಕೆ, ತಲೆಗೆ ಹಚ್ಚಿ ಸಂಭ್ರಮ ಪಟ್ಟರು.
ಆಯಾ ಓಣಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಕಾಮಣ್ಣ ಮೂರ್ತಿಗಳನ್ನು ಮಧ್ಯಾಹ್ನ ದಹನ ಮಾಡಿದ ನಂತರ ಬಣ್ಣದಾಟಕ್ಕೆ ತೆರೆಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.