ADVERTISEMENT

ಚನ್ನಮ್ಮನ ಕಿತ್ತೂರು | ಮನೆ ಗೋಡೆ ಕುಸಿತ: ತಪ್ಪಿದ ದುರಂತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:16 IST
Last Updated 26 ಅಕ್ಟೋಬರ್ 2024, 16:16 IST
ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ಉಮರ್ಜಿ ಅವರ ಮನೆ ಗೋಡೆ ಕುಸಿದು ಬಿದ್ದಿರುವುದು
ಚನ್ನಮ್ಮನ ಕಿತ್ತೂರಿನ ಗುರುವಾರ ಪೇಟೆಯ ಉಮರ್ಜಿ ಅವರ ಮನೆ ಗೋಡೆ ಕುಸಿದು ಬಿದ್ದಿರುವುದು   

ಚನ್ನಮ್ಮನ ಕಿತ್ತೂರು: ಇಲ್ಲಿಯ ಗುರುವಾರಪೇಟೆಯ ಶ್ರೀನಾಥ ಉಮರ್ಜಿ ಹಾಗೂ ಸಂಗೋಜಿ ಕುಟುಂಬಕ್ಕೆ ಸೇರಿದ ಮನೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಮಲಗುವ ಕೋಣೆಯ ಗೋಡೆಯಾಗಿದ್ದರಿಂದ ಕುಟುಂಬಸ್ಥರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಉಮರ್ಜಿ ಮತ್ತು ಸಂಗೋಜಿ ಕುಟುಂಬದ ಎರಡೂ ಮನೆಗಳಿಗೂ ಇದೊಂದೇ ಗೋಡೆಯಾಗಿತ್ತು. ಸಂಗೋಜಿ ಅವರ ಮನೆಯಲ್ಲಿ ಸದ್ಯ ಯಾರೂ ವಾಸಿಸುತ್ತಿಲ್ಲ. ಆದರೆ ಮನೆ ಸೋರುವ ವಿಷಯ ಅವರಿಗೆ ತಿಳಿಸಲಾಗಿತ್ತು. ಬೇಗ ಗಮನ ಹರಿಸದ್ದರಿಂದ ಉಮರ್ಜಿ ಅವರ ಮನೆ ಕಡೆಗೆ ಗೋಡೆ ಬಾಗಿ ಬಿದ್ದಿದೆ ಎನ್ನಲಾಗಿದೆ.

ಕೊಠಡಿಯಲ್ಲಿ ಬಾರಿ ಮಣ್ಣು ಸಂಗ್ರಹವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.