ADVERTISEMENT

ಹುಕ್ಕೇರಿ: ಮತದಾನಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 13:34 IST
Last Updated 6 ಮೇ 2024, 13:34 IST
ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಸಹಾಯಕ ಚುನಾವಣಾ ಅಧಿಕಾರಿಯೂ ಆದ ಬೆಳಗಾವಿ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಚುನಾವಣೆ ಸಿಬ್ಬಂದಿಗೆ ಇವಿಎಂ ಯಂತ್ರಗಳನ್ನು ಹಸ್ತಾಂತರಿಸಿದರು
ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಸಹಾಯಕ ಚುನಾವಣಾ ಅಧಿಕಾರಿಯೂ ಆದ ಬೆಳಗಾವಿ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಚುನಾವಣೆ ಸಿಬ್ಬಂದಿಗೆ ಇವಿಎಂ ಯಂತ್ರಗಳನ್ನು ಹಸ್ತಾಂತರಿಸಿದರು   

ಹುಕ್ಕೇರಿ: ತಾಲ್ಲೂಕಿನ ಯಮಕನಮರಡಿ ಮತ್ತು ಹುಕ್ಕೇರಿ ಮತ ಕ್ಷೇತ್ರಗಳಲ್ಲಿ ಮೇ 7 ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ 2,300 ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ತೆರಳಿದರು ಎಂದು ಸಹಾಯಕ ಚುನಾವಣಾಧಿಕಾರಿಯೂ ಆದ ಬೆಳಗಾವಿ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಮತ್ತು ಹುಕ್ಕೇರಿ ಎ.ಆರ್.ಒ ರೇಖಾ ಡೊಳ್ಳಿನವರ ತಿಳಿಸಿದರು.

ಸ್ಥಳೀಯ ಎಸ್.ಕೆ.ಹೈಸ್ಕೂಲ್ ಮೈದಾನದಲ್ಲಿ ನೇಮಕಗೊಂಡ ಚುನಾವಣಾ ಸಿಬ್ಬಂದಿಗೆ ಮೂರು ವಿದ್ಯುನ್ಮಾನ ಮತಯಂತ್ರ (ಕಂಟ್ರೊಲ್ ಯುನಿಟ್, ಬ್ಯಾಲೆಟ್ ಯುನಿಟ್ ಮತ್ತು ವಿವಿಪ್ಯಾಟ್) ಮತ್ತು ಸಾಮಗ್ರಿ ಪಡೆದುಕೊಂಡು ನಿಗದಿ ಪಡಿಸಿದ ಮತಗಟ್ಟೆಗಳಿಗೆ ತೆರಳಿದರು.

ಹುಕ್ಕೇರಿ ಕ್ಷೇತ್ರಕ್ಕೆ 224 ಮತಗಟ್ಟೆ ಮತ್ತು ಯಮಕನಮರಡಿ ಕ್ಷೇತ್ರಕ್ಕೆ 236 ಮತಗಟ್ಟೆಗಳಿವೆ. ಎರಡು ಕ್ಷೇತ್ರಕ್ಕೆ 2,300 ಸಿಬ್ಬಂದಿ ನೇಮಿಸಲಾಗಿದೆ ಎಂದರು.

ADVERTISEMENT

ಹುಕ್ಕೇರಿ ಕ್ಷೇತ್ರದಲ್ಲಿ 1,08,387 ಮಹಿಳಾ ಮತದಾರರು ಸೇರಿ ಒಟ್ಟು 2,15,213 ಮತದಾರರಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ 1,05,173 ಮಹಿಳಾ ಮತದಾರರು ಸೇರಿ ಒಟ್ಟು 2,08,523 ಮತದಾರರಿದ್ದಾರೆ.

ಹುಕ್ಕೇರಿ ಕ್ಷೇತ್ರದಲ್ಲಿ 114 ಮತ್ತು ಯಮಕನಮರಡಿಯಲ್ಲಿ 119 ವೆಬ್‌ಕಾಸ್ಟ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  

ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿಗೆ ಚಹಾ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ತಿಳಿಸಿದರು.

ನೋಡಲ್ ಆಫಿಸರ್ ಶಶಿಕಾಂತ ಹೆಗಡೆ, ಎಂ.ಸಿ.ಸಿ.ನೋಡಲ್ ಅಧಿಕಾರಿ ಬಸವರಾಜ, ಚುನಾವಣಾ ಶಿರಸ್ತೇದಾರ್ ಅನಿತಾ ಏಶಿ, ಸಂತೋಷ ನಾಯ್ಕರ್ ಇದ್ದರು.

ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಸಹಾತಕ ಚುನಾವಣಾ ಅಧಿಕಾರಿಯೂ ಆದ ಬೆಳಗಾವಿ ಎಸಿ ಬಸವಣ್ಣೆಪ್ಪ ಕಲಶೆಟ್ಟಿ ಚುನಾವಣೆ ಸಿಬ್ಬಂದಿಗೆ ಸೋಮವಾರ ಅಂತಿಮ ತರಬೇತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.