ADVERTISEMENT

ನೇಸರಗಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:36 IST
Last Updated 5 ಜುಲೈ 2024, 14:36 IST
ಕೇಂದ್ರ ಜಲಶಕ್ತಿ ಅಭಿಯಾನ  ತಂಡವು ನೇಸರಗಿ ಸಮೀಪದ ದೇಶನೂರ, ಹಣಬರಹಟ್ಟಿ ಗ್ರಾ.ಪಂಗೆ ಭೇಟಿ ನೀಡಿ ಜಲಶಕ್ತಿ ಅಭಿಯಾನ ಕಾರ್ಯಕ್ರಮಗಳನ್ನು ವೀಕ್ಷಿಸತು
ಕೇಂದ್ರ ಜಲಶಕ್ತಿ ಅಭಿಯಾನ  ತಂಡವು ನೇಸರಗಿ ಸಮೀಪದ ದೇಶನೂರ, ಹಣಬರಹಟ್ಟಿ ಗ್ರಾ.ಪಂಗೆ ಭೇಟಿ ನೀಡಿ ಜಲಶಕ್ತಿ ಅಭಿಯಾನ ಕಾರ್ಯಕ್ರಮಗಳನ್ನು ವೀಕ್ಷಿಸತು   

ನೇಸರಗಿ: ಕೇಂದ್ರ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಡಿ.ವಿ.ಸ್ವಾಮಿ ನೇತೃತ್ವದ ಕೇಂದ್ರ ಜಲಶಕ್ತಿ ಅಭಿಯಾನ ತಂಡವು ಸಮೀಪದ ದೇಶನೂರ, ಹಣಬರಹಟ್ಟಿ ಗ್ರಾ.ಪಂಗೆ ಭೇಟಿ ನೀಡಿ ಜಲಶಕ್ತಿ ಅಭಿಯಾನ ಕಾರ್ಯಕ್ರಮಗಳನ್ನು ಬುಧವಾರ ವೀಕ್ಷಿಸಿತು.

ನರೇಗಾ ಯೋಜನೆಯಡಿಯಲ್ಲಿ ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಕೇಂದ್ರೀಯ ಅಂತರ ಜಲ ಸಮೀತಿಯ ವಿಜ್ಞಾನಿ ಡಾ.ಸುಚೇತನಾ ಬೀಸ್ವಾಸ್, ತಂಡದವರು ಪರಿಶೀಲನೆ ಮಾಡಿದರು.

ಹಣಬರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಇಲಾಖೆಯ ಸಂಯೋಗದೊಂದಿಗೆ ನರೇಗಾ ಯೋಜನೆಯಡಿ ಕೈಗೊಂಡಿರುವ ನೀರುಗಾವಲಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ನರೇಗಾ ಕೂಲಿಕಾರರೊಂದಿಗೆ ಯೋಜನೆಯ ಕುರಿತು ಸಂವಾದ ನಡೆಸಿದರು.

ADVERTISEMENT

 ಕಸವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘಟಕದಲ್ಲಿ ಕೆಲಸದಲ್ಲಿ ನಿರತರಾಗಿರುವ ಸ್ವಸಹಾಯ ಸಂಘದ ಗುಂಪಿನ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದರು.

ಬೆಳಗಾವಿ ಜಿ.ಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಸಂಪಗಾಂವಿ, ತಾ.ಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ರಘು ಬಿ.ಎನ್, ಸುರೇಶ ಬಗಲಿ, ಗ್ರಾಪಂ ಪಿಡಿಓ, ಕೀರಣ ಶಿಂದೆ, ಸುನೀಲ್ ಔವರನಾಳ, ಎಸ್.ವ್ಹಿ.ಹಿರೇಮಠ ತಾ.ಪಂ, ಅರಣ್ಯ ಇಲಾಖೆಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.