ADVERTISEMENT

‘ರೈತರ ಬಾಳು ಬೆಳಗಿದ ಬಾಬೂಜಿ’

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 5:32 IST
Last Updated 6 ಏಪ್ರಿಲ್ 2024, 5:32 IST
ಚಿಕ್ಕೋಡಿಯಲ್ಲಿ ಆಯೊಯೋಜಿಸಿದ್ದ ಬಾಬು ಜಗಜೀವನರಾಮ್‌ ಜಯಂತಿಯಲ್ಲಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಮಾತನಾಡಿದರು
ಚಿಕ್ಕೋಡಿಯಲ್ಲಿ ಆಯೊಯೋಜಿಸಿದ್ದ ಬಾಬು ಜಗಜೀವನರಾಮ್‌ ಜಯಂತಿಯಲ್ಲಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಮಾತನಾಡಿದರು   

ಚಿಕ್ಕೋಡಿ: ‘ಬಾಬು ಜಗಜೀವನ ರಾಮ್ ಅವರು ತಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರಾಗಿದ್ದಾರೆ’ ಎಂದು ಚಿಕ್ಕೋಡಿ ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಹೇಳಿದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಚಿಕ್ಕೋಡಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಲ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗಜೀವನರಾಮ್‌ ಅವರು ನಡೆದು ಬಂದ ದಾರಿಯ ಕುರಿತು ಆಶಾ ಕಾಂಬಳೆ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಸಮಾಜದ ಮುಖಂಡರಾದ ಬಾಬಾಸಾಹೇಬ ಕೆಂಚನ್ನವರ, ರಾಜು ಮೈಶಾಳೆ, ರಾಯಪ್ಪ ಶಿರಹಟ್ಟಿ, ಅನಿಲ ಮೈಶಾಳೆ, ಪ್ರಶಾಂತ ಪಾಟೀಲ, ಭರತ ಕಲಾಚಂದ್ರ, ಸಂಜಯ ದೇಸಾಯಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.