ADVERTISEMENT

ಜಂತುಹುಳು ‌ನಿವಾರಣಾ ದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 5:18 IST
Last Updated 13 ಫೆಬ್ರುವರಿ 2024, 5:18 IST

ಬೆಳಗಾವಿ: ‘ಮಕ್ಕಳೇ ಈ ದೇಶದ ಭವಿಷ್ಯ. ಅವರು ಆರೋಗ್ಯಯುತವಾಗಿ ಬೆಳೆದದರೆ, ದೇಶದ ಅತ್ಯುಪಯುಕ್ತ ಆಸ್ತಿಯಾಗಬಲ್ಲರು’ ಎಂದು ನಿರ್ದೇಶಕ ಡಾ.ಎಸ್.ಸಿ.ಧಾರವಾಡ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಡಾ.ಬಸವರಾಜ ಕುಡಸೋಮಣ್ಣವರ, ಜಂತುಹುಳು ಹುಟ್ಟುವ ಪ್ರಕ್ರಿಯೆ, ಅವು ಶರೀರ ಸೇರುವ ಬಗೆ, ಅವುಗಳಿಂದ ರಕ್ಷಣೆ ವಿಷಯ ಕುರಿತು ಉಪನ್ಯಾಸ ನೀಡಿದರು.

ADVERTISEMENT

ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಡ್ಡಿ, ತಜ್ಞ ಡಾ.ಸಂತೋಷಕುಮಾರ ಕರಮಸಿ ಸಭಿಕರ ಪ್ರಶ್ನೆಗೆ ಉತ್ತರಿಸಿದರು. 

ಡಾ.ಸೌಮ್ಯಾ ವೆರ್ಣೇಕರ್‌, ಡಾ. ಯೋಗೇಶ ರಾವಳ ಇತರರಿದ್ದರು. ಸಂತೋಷ ಇತಾಪೆ ನಿರೂಪಿಸಿದರು.
30ಕ್ಕೂ ಅಧಿಕ ಮಕ್ಕಳಿಗೆ ಜಂತುಹುಳು ನಿವಾರಣೆ ಔಷಧ ಉಚಿತವಾಗಿ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.