ADVERTISEMENT

ಬೈಲಹೊಂಗಲ: ಹನಮಂತ ದೇವರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:35 IST
Last Updated 5 ಜುಲೈ 2024, 14:35 IST
ಬೈಲಹೊಂಗಲ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ದೇವಸ್ಥಾನ ಮುಖಂಡರು, ಹಿರಿಯರು ಚಾಲನೆ ನೀಡಿದರು
ಬೈಲಹೊಂಗಲ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ದೇವಸ್ಥಾನ ಮುಖಂಡರು, ಹಿರಿಯರು ಚಾಲನೆ ನೀಡಿದರು   

ಬೈಲಹೊಂಗಲ: ಪಟ್ಟಣದ ಹಳೆಯ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಐದು ದಿನಗಳ ಕಾಲ ನೆರವೇರಿದ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಹನಮಂತ ದೇವರ ಪ್ರತಿಮೆಗೆ ಅಭಿಷೇಕ, ಕುಂಕುಮಾರ್ಚಣೆ, ಅಲಂಕಾರ, ಬುತ್ತಿ ಪೂಜೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ದೊಡ್ಡ ಕೆರೆ ಪಕ್ಕದ ಬಯಲು ಕುಸ್ತಿ ಕಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ರೋಚಕವಾಗಿ ನಡೆದವು. ರಾಜ್ಯ, ಹೊರ ರಾಜ್ಯದ ಕುಸ್ತಿ ಪಟುಗಳು ಭಾಗವಹಿಸಿ ಶಕ್ತಿ ಪ್ರದರ್ಶಿಸಿದರು. ಸುಮಾರು 60ಕ್ಕೂ ಹೆಚ್ಚು ಕುಸ್ತಿಪಟುಗಳು ಸೆಣಸಿದರು. ಮೊದಲ ಜೋಡಿ ಕುಸ್ತಿಯಲ್ಲಿ ಕೊಲ್ಲಾಪೂರ ಪೈಲ್ವಾನ ಪ್ರಕಾಶ ಗೊಡಗೇರಿ ಜೊತೆ ಸೆಣಸಿದ ಕೊಲ್ಲಾಪೂರ ಪೈಲ್ವಾನ ನೂರುದ್ದಿನ ಇಂಗಳೆ ಅವರನ್ನು ಸೋಲಿಸಿದರು.

ADVERTISEMENT

ಜಾತ್ರಾ ಕಮೀಟಿ ಮುಖಂಡರಾದ ಮಹಾಬಳೇಶ್ವರ ಬೋಳನ್ನವರ, ವಿಠ್ಠಲ ಅಂದಾನಿ, ಶಂಕರ ಕಡಕೋಳ, ಶ್ರೀಶೈಲ ಗೀರನವರ, ಉಮೇಶ ಬೋಳನ್ನವರ, ದೇವೇಂದ್ರಪ್ಪ ಪೂಜೇರಿ, ಭಗವಂತ ಬಡಿಗೇರ, ಸೋಮನಗೌಡ ಪಾಟೀಲ, ಅನೇಕರು ಜಾತ್ರೆ ಯಶಸ್ವಿಗೆ ಶ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.