ADVERTISEMENT

ಬೆಳಗಾವಿ: ಸಂಭ್ರಮದಿಂದ ಕನಕದಾಸರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 14:31 IST
Last Updated 18 ನವೆಂಬರ್ 2024, 14:31 IST
ಬೆಳಗಾವಿಯಲ್ಲಿ ಕನಕದಾಸರ ಚಿತ್ರದ ಮೆರವಣಿಗೆಗೆ ಶಾಸಕ ಆಸಿಫ್‌ ಸೇಠ್‌ ಚಾಲನೆ ನೀಡಿದರು
ಬೆಳಗಾವಿಯಲ್ಲಿ ಕನಕದಾಸರ ಚಿತ್ರದ ಮೆರವಣಿಗೆಗೆ ಶಾಸಕ ಆಸಿಫ್‌ ಸೇಠ್‌ ಚಾಲನೆ ನೀಡಿದರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಕನಕದಾಸ ಜಯಂತಿ ಆಚರಿಸಲಾಯಿತು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನಕದಾಸ‌ರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ‘ದಾಸ ಸಾಹಿತ್ಯದ ಮೂಲಕ ಕನಕದಾಸರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ನೀಡಿದ ಅಪಾರ’ ಎಂದು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಯೋಗಿ ಅಮರೇಶ್ವರ ಅಪ್ಪಾಜಿ, ‘ಯಾರೂ ಆಡಂಬರಕ್ಕಾಗಿ ಭಕ್ತಿ ತೋರಬಾರದು. ಸನ್ಮಾರ್ಗದಲ್ಲಿ ಸಾಗಿ ದೇವರ ಕೃಪೆಗೆ ಪಾತ್ರವಾಗಬೇಕು’ ಎಂದು ಕರೆಕೊಟ್ಟರು.

ADVERTISEMENT

ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಉಪನೀರ್ದೇಶಕಿ ವಿದ್ಯಾವತಿ ಭಂಜತ್ರಿ, ಮಾಜಿ ಮೇಯರ್‌ ಯಲ್ಲಪ್ಪ ಕುರುಬರ, ಪ್ರಕಾಶ ಪೂಜೇರಿ, ರೇಖಾ ದಳವಾಯಿ, ಎಸ್.ಟಿ.ಸಾಬನ್ನವರ, ಪ್ರತಾಪ ಕುಮಾರ ಇತರರಿದ್ದರು.

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು

ಇದಕ್ಕೂ ಮುನ್ನ ನಡೆದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕ ಆಸಿಫ್‌ ಸೇಠ್‌ ಅವರು, ಕನಕದಾಸ ವೃತ್ತದಲ್ಲಿ ಚಾಲನೆ ನೀಡಿದರು. ಮೇಯರ್‌ ಸವಿತಾ ಕಾಂಬಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.