ADVERTISEMENT

ತಲ್ಲೂರ: ಕಾರ ಹುಣ್ಣಿಮೆ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 12:58 IST
Last Updated 25 ಜೂನ್ 2021, 12:58 IST
ತಲ್ಲೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ರೈತರು ಎತ್ತುಗಳ ಮೆರವಣಿಗೆಯನ್ನು ಶುಕ್ರವಾರ ನಡೆಸಿದರು
ತಲ್ಲೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ರೈತರು ಎತ್ತುಗಳ ಮೆರವಣಿಗೆಯನ್ನು ಶುಕ್ರವಾರ ನಡೆಸಿದರು   

ತಲ್ಲೂರ (ಬೆಳಗಾವಿ ಜಿಲ್ಲೆ): ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಕರಿ ಹರಿಯುವ ಮೂಲಕ ರೈತರು ಸರಳವಾಗಿ ಶುಕ್ರವಾರ ಆಚರಿಸಿದರು.

ದೇಸಾಯಿ ಮನೆತನದವರು ಪ್ರತಿ ವರ್ಷದಂತೆ ಈ ವರ್ಷವೂ ಎತ್ತುಗಳನ್ನು ಬೇವು ಹಾಗೂ ಮಾವಿನ ಎಲೆಗಳ ಹಾರದಿಂದ ಸಿಂಗರಿಸಿ ಪೂಜಿಸಿದರು. ನಂತರ ಜೋಡೆತ್ತುಗಳನ್ನು ಅಗಸಿಯಿಂದ ದೇಸಾಯಿಯವರ ವಾಡೆಯವರೆಗೆ ಮೆರವಣಿಗೆ ನಡೆಸಿದರು.

‘ಬಿಳಿ ಎತ್ತು ಕರಿ ಹರಿದಿದ್ದು, ಹಿಂಗಾರಿ ಜೋಳದ ಬೆಳೆ ಸಮೃದ್ಧವಾಗಿ ಬರಲಿದೆ. ಉತ್ತಮ ಇಳುವರಿ ಸಿಗಲಿದೆ’ ಎಂದು ರೈತರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುಖಂಡರಾದ ವಿನಯಕುಮಾರ ದೇಸಾಯಿ, ಶ್ರೀಮಂತ ವಿಕ್ರಮ ದೇಸಾಯಿ, ಗ್ರಾ.ಪಂ. ದಸ್ಯ ಪ್ರಪುಲಚಂದ್ರ ದೇಸಾಯಿ, ಮಲ್ಲಿಕಾರ್ಜುನ ಅಣ್ಣಿಗೇರಿಗೌಡ್ರ, ಸಚಿನ ಹೋಳಿ, ಶಂಕರೆಪ್ಪ ಕಾಶಪ್ಪನವರ, ವಿಠ್ಠಲ ನಾಯ್ಕರ, ಮಲ್ಲಿಕಾರ್ಜುನ ಉಗರಗೋಳ, ಬಸವರಾಜ ನಾಗನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.