ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ, ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಪಟ್ಟಣದಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸಿದರು.
ಗೋ ಪೂಜೆ ಮಾಡಿ ಚನ್ನಮ್ಮನ ಪ್ರತಿಮೆಗೆ ಗೌರವ ಸಮರ್ಪಿಸಿದ ಯಡಿಯೂರಪ್ಪ ಯಾತ್ರೆಗೆ ಚಾಲನೆ ನೀಡಿದರು. ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ರೋಡ್ ಶೋ ರಾಯಣ್ಣ ವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿತು. ಮಾರ್ಗದುದ್ದಕ್ಕೂ ವಿವಿಧ ವಾದ್ಯಮೇಳಗಳು ಕಳೆತಂದವು. ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ನಿರಂತರ ಜೈಕಾರ ಮೊಳಗಿಸಿದರು. ಯಡಿಯೂರಪ್ಪ ಅವರ ಸ್ವಾಗತಕ್ಕಾಗಿ ಪಟ್ಟಣವನ್ನು ಕೇಸರಿಮಯ ಮಾಡಲಾಗಿತ್ತು.
ಬಿಜೆಪಿ ಬಾವುಟ ಹಿಡಿದು, ಕೇಸರಿ ರುಮಾಲು, ಟೊಪ್ಪಿಗೆ ಹಾಕಿಕೊಂಡು ಕಾರ್ಯಕರ್ತರು ಮೆರವಣಿಗೆ ಮುಂದೆ ಕುಣಿದು ಕುಪ್ಪಳಿಸಿದರು. ಬಡ್ಲಿ ಗ್ರಾಮದ ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತದ ಮೂಲಕ ಗಮನ ಸೆಳೆದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕರಾದ ರಮೇಶ ಜಾರಕಿಹೊಳಿ, ಮಹಾಂತೇಶ ದೊಡಗೌಡ್ಡರ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಮಹಾಂತೇಶ ಕವಟಗಿಮಠ, ಜಗದೀಶ ಮೆಟಗುಡ್ಡ ಯಾತ್ರೆಯಲ್ಲಿ ಇದ್ದರು.
ಸ್ಥಳೀಯ ಮುಖಂಡರಾದ ವಿಜಯ ಮೆಟಗುಡ್ಡ, ಮಡಿವಾಳಪ್ಪ ಚಳಕೊಪ್ಪ, ಗುರು ಮಟಗುಡ್ಡ, ಬಸವರಾಜ ನೇಸರಗಿ, ಲಕ್ಕಪ್ಪ ಕಾರಗಿ, ಅಮಿತ ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ದೇಸಾಯಿ, ಎಫ್.ಎಸ್. ಸಿದ್ದನಗೌಡರ, ಮಹೇಶ ಹರಕುಣಿ, ಪ್ರಪುಲ ಪಾಟೀಲ, ಶ್ರೀಶೈಲ ಯಡಳ್ಳಿ, ಸುಭಾಷ ತುರಮರಿ, ಮುರುಗೇಶ ಗುಂಡ್ಲೂರ, ರತ್ನಾ ಗೋದಿ, ಶಾಂತಾ ಮಡ್ಡಿಕಾರ, ಸಂತೋಷ ಹಡಪದ, ಶಿವಾನಂದ ಬಡ್ಡಿಮನಿ, ಸುನೀಲ ಈಟಿ ನೇತೃತ್ವ ವಹಿಸಿದ್ದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.