ಬೆಳಗಾವಿ: ಕೋವಿಡ್–19 ಲಾಕ್‌ಡೌನ್‌ನಿಂದ ಗಳಿಕೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಕುಂಬಾರರಿಂದ 1,111 ಹಣತೆಗಳನ್ನು ಖರೀದಿಸುವ ಮೂಲಕ ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಎನ್‌ಎಸ್‌ಎಸ್ ಸ್ವಯಂಸೇವಕರು ನೆರವಾಗಿದ್ದರೆ.
ಆ ಹಣತೆಗಳನ್ನು ಇಲ್ಲಿನ ಜೆಎನ್‌ಎಂಸಿ ಕ್ಯಾಂಪಸ್‌ನಲ್ಲಿರುವ ಶಿವಾಲಯದಲ್ಲಿ ಸೋಮವಾರ ಕಾರ್ತೀಕೋತ್ಸವ ಅಂಗವಾಗಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಬಳಸಲಾಯಿತು. ಇದೇ ವೇಳೆ, 45 ವರ್ಷಗಳಿಂದ ಕುಂಬಾರಿಕೆಯಲ್ಲಿ ತೊಡಗಿರುವ ನಾಗಪ್ಪ ಮಹಾದೇವಪ್ಪ ಕುಂಬಾರ ಅವರನ್ನು ಎನ್‌ಎಸ್‌ಎಸ್ ಕೋಶದಿಂದ ಸತ್ಕರಿಸಲಾಯಿತು.
ಕುಲಸಚಿವ ಡಾ.ವಿ.ಎ.ಕೋಠಿವಾಲೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಉಪಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಆಡಳಿತಾಧಿಕಾರಿ ಎಸ್.ಜಿ. ಪಾಟೀಲ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಅಶ್ವಿನಿ ನರಸನವರ, ಸಹಾಯಕ ಸಂಯೋಜಕ ಸೈಯದ್ ಕಿಲ್ಲೇದಾರ, ಡಾ.ಸಂಜೀವಕುಮಾರ್, ಡಾ.ಸಂಜಯ ಉಗಾರೆ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ನಮ್ರತಾ ಕೆ. ಇದ್ದರು.
ಎನ್‌ಎಸ್‌ಎಸ್ ಕೋಶ ಹಾಗೂ ಶಿವಾಲಯ ಸಮಿತಿಯಿಂದ ದೀಪೋತ್ಸವ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.