ADVERTISEMENT

‘ನಮ್ಮ ವಿಶ್ವ ಅರಿಯೋಣ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2018, 14:43 IST
Last Updated 25 ಸೆಪ್ಟೆಂಬರ್ 2018, 14:43 IST
ಕಾರ್ಯಕ್ರಮದಲ್ಲಿ ವಿಜ್ಞಾನಿ ಕೆ.ಬಿ. ರಮೇಶ ಮಾತನಾಡಿದರು
ಕಾರ್ಯಕ್ರಮದಲ್ಲಿ ವಿಜ್ಞಾನಿ ಕೆ.ಬಿ. ರಮೇಶ ಮಾತನಾಡಿದರು   

ಬೆಳಗಾವಿ: ‘ಬಾಹ್ಯಾಕಾಶ ಅನೇಕ ನಿಗೂಢಗಳ ಆಗರ. ಮಾನವನ ಅಭಿವೃದ್ಧಿಗೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಅದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸಲು ವಿಜ್ಞಾನಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ’ ಎಂದು ಭಾರತೀಯ ಖಭೌತ ಸಂಸ್ಥೆಯ ವಿಜ್ಞಾನಿ ಕೆ.ಬಿ. ರಮೇಶ ಅಭಿಪ್ರಾಯಪಟ್ಟರು.

ಇಲ್ಲಿನ ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ, ರಾಜ್ಯ ವಿಜ್ಞಾನ ಪರಿಷತ್ತು, ಚಂದ್ರಗಿರಿ ಮಹಿಳಾ ಶಿಕ್ಷಣ ಕಾಲೇಜು ಹಾಗೂ ಆರ್.ಎಲ್. ವಿಜ್ಞಾನ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮ ವಿಶ್ವ ಅರಿಯೋಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ವಿಜ್ಞಾನ ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಆರ್. ವಡಗಾವಿ, ‘ವಿಜ್ಞಾನದ ಕೊಡುಗೆಯನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಸ್ವಾರ್ಥಕ್ಕಾಗಿ ಬಳಸಿದರೆ ವಿನಾಶಕ್ಕೆ ಕಾರಣವಾಗುತ್ತದೆ. ವಿಜ್ಞಾನದ ಉತ್ತಮ ಅಂಶಗಳನ್ನು ಜನರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ವಿಜ್ಞಾನ ಸಂವಹನಕಾರರದ್ದಾಗಿದೆ’ ಎಂದರು.

ADVERTISEMENT

ಚಂದ್ರಗಿರಿ ಮಹಿಳಾ ಶಿಕ್ಷಣ ಕಾಲೇಜು ಉಪನ್ಯಾಸಕ ಶ್ರೀಧರ ಕಿಳ್ಳಿಕೇತರ, ಕರ್ನಾಟಕ ಕೋಚಿಂಗ್ ಸೆಂಟರ್ ಕಾರ್ಯದರ್ಶಿ ಶಿವಾನಂದ ಕಡಕೋಳ, ಆರ್.ಎಲ್. ವಿಜ್ಞಾನ ಕಾಲೇಜಿನ ಪ್ರೊ.ಸುಷ್ಮಾ ಕಟ್ಟಿ ಇದ್ದರು.

ರಾಜಶೇಖರ ಪಾಟೀಲ ಸ್ವಾಗತಿಸಿದರು. ಮೇಘಾ ಗಲಗಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.