ಬೆಳಗಾವಿ: ‘ರಾಜ್ಯ ಸರ್ಕಾರದ ಉದ್ಯಮವಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ(ಕೆಎಸ್‌ಡಿಎಲ್)ದ ಉತ್ಪನ್ನಗಳು, ಶುದ್ಧ ನೈಸರ್ಗಿಕ ಮೈಸೂರು ಶ್ರೀಗಂಧದ ಸಾಬೂನು ದೇಶದ ನಂ.1 ಸ್ಥಾನವನ್ನು ಗಿಟ್ಟಿಸಲಿ’ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ಶಕ್ರವಾರ ಆರಂಭವಾದ ಸಾಬೂನು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅತ್ಯುತ್ತಮ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜನರು ಬಳಕೆ ಮಾಡಬೇಕು. ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಸರ್ಕಾರಿ ಕಂಪನಿಯನ್ನು ಪ್ರೋತ್ಸಾಹಿಸಬೇಕು. ಮೊದಲ ಬಾರಿಗೆ ಬೆಳಗಾವಿಯಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳು ದೊರೆಯುವಂತಾಗಲು ಸಾಬೂನು ಮೇಳ ಆಯೋಜಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಕೆಎಸ್‌ಡಿಎಲ್ ವತಿಯಿಂದ ಶುದ್ಧ ನೈಸರ್ಗಿಕ ಶ್ರೀಗಂಧದೆಣ್ಣೆಯುಕ್ತ ಉತ್ಪನ್ನಗಳನ್ನು ತಯಾರಿಸುತ್ತಿದೆ. ₹ 917 ಕೋಟಿ ವಹಿವಾಟು ಹಾಗೂ ₹ 115 ಕೋಟಿ ನಿವ್ವಳ ಲಾಭ ಗಳಿಸಿದೆ. ಇಲ್ಲಿನ ಜನರು ಕಂಪನಿಯ ಉತ್ಪನ್ನಗಳನ್ನು ಬಳಕೆ ಮಾಡಲು ಅನುಕೂಲ ಆಗುವಂತೆ ನಗರದಲ್ಲಿ ಮಳಿಗೆ ಸ್ಥಾಪಿಸಲಾಗುವುದು’ ಎಂದು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ. ಶಿರೂರು ತಿಳಿಸಿದರು.
ಕೆ.ಎಸ್.ಡಿ.ಎಲ್. ಪ್ರಧಾನ ವ್ಯವಸ್ಥಾಪಕ ಸಿ.ಎಂ. ಸುವರ್ಣಕುಮಾರ್, ಬೆಂಗಳೂರು ಶಾಖೆಯ ವ್ಯಸ್ಥಾಪಕ ನಾರಾಯಣಸ್ವಾಮಿ ಇದ್ದರು.
ಜ.16ರವರೆಗೆ ಮೇಳ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.