ADVERTISEMENT

ಹುಕ್ಕೇರಿ: ಪುರಸಭೆಯಿಂದ ಲಂಡೂರಿ ಹಳ್ಳ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 16:06 IST
Last Updated 24 ಮೇ 2024, 16:06 IST
ಹುಕ್ಕೇರಿ ಪಟ್ಟಣದ ಲಂಡೂರಿ ಹಳ್ಳವನ್ನು ಪುರಸಭೆಯಿಂದ ಜೆಸಿಬಿ ಯಂತ್ರದ ಮೂಲಹ ಸ್ವಚ್ಛಗೊಳಿಸಲಾಯಿತು
ಹುಕ್ಕೇರಿ ಪಟ್ಟಣದ ಲಂಡೂರಿ ಹಳ್ಳವನ್ನು ಪುರಸಭೆಯಿಂದ ಜೆಸಿಬಿ ಯಂತ್ರದ ಮೂಲಹ ಸ್ವಚ್ಛಗೊಳಿಸಲಾಯಿತು   

ಹುಕ್ಕೇರಿ: ಪಟ್ಟಣದ ಮಧ್ಯಬಾಗದಲ್ಲಿ ಹರಿದು ಹೋಗುವ ನಾಲಾ (ಲಂಡೂರಿ ಹಳ್ಳ)ವನ್ನು ಪುರಸಭೆಯಿಂದ ಜೆಸಿಬಿ ಮೂಲಕ ಶುಕ್ರವಾರ ಸ್ವಚ್ಛಗೊಳಿಸಲಾಯಿತು.

ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಾದರೆ ಈ ನಾಲಾಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಅನಾಹುತ ಮಾಡುತ್ತದೆ. ಎರಡು ವರ್ಷದ ಹಿಂದೆ ಭಾರಿ ಮಳೆ ಹಾಗೂ ಹಳ್ಳದಲ್ಲಿ ಕೆಸರು, ಮಣ್ಣು ತುಂಬಿದ್ದರಿಂದ ಮಳೆ ನೀರು ನಾಲೆಯ ಅಕ್ಕಪಕ್ಕದ ಮನೆಗಳಲ್ಲಿ ಮತ್ತು ವ್ಯಾಪಾರಿ ಮಳಿಗೆಗಳಲ್ಲಿ ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿತ್ತು. ಕಾರುಗಳು ನೀರಲ್ಲಿ ಹರಿದು ಹೋಗಿದ್ದವು.

ಇದರಿಂದ ಎಚ್ಚೆತ್ತುಕೊಂಡಿರುವ ಪುರಸಭೆ, ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಅಧಿಕಾರಿ ಸಂತೋಷ ಹುಲ್ಲೆನ್ನವರ ನೇತೃತ್ವದಲ್ಲಿ ನಾಲಾ ಸ್ವಚ್ಛತೆಗೆ ಮುಂದಾಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಟ್ಟಣದ ಗಜಬಾರವಾಡಿ ರಸ್ತೆಯ ನಾಲಾ, ಮಾಸಾಬಿ ಕಾರಂಜಿ ಬಳಿಯ ನಾಲಾ ಮೂಲಕ ಹೋಗುವ ಮಳೆ ನೀರು ಸರಾಗವಾಗಿ ಹರಿಯಲು ಕಳೆದೆರಡು ದಿನದಿಂದ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ.

ಹುಕ್ಕೇರಿ ಪುರಸಭೆಯ ವತಿಯಿಂದ ಪಟ್ಟಣದ ಮಧ್ಯಭಾಗದಲ್ಲಿ ಹರಿದು ಹೋಗುವ ಲಂಡೂರಿ ಹಳ್ಳದಲ್ಲಿನ ಕೆಸರು ಮತ್ತಿತರ ಹೊಲಸನ್ನು ಜೆಸಿಬಿ ಮೂಲಕ ಸ್ವಚ್ಛ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.