ADVERTISEMENT

ಶೂಟಿಂಗ್ ಚಾಂಪಿಯನ್‍ಶಿಫ್‍ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:11 IST
Last Updated 3 ಜುಲೈ 2024, 14:11 IST
ಆಕಾಶ ಗುಡಗೆನಟ್ಟಿ
ಆಕಾಶ ಗುಡಗೆನಟ್ಟಿ   

ಬೆಳಗಾವಿ: ಕೆಎಲ್‍ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್‍ಸಿಸಿ ಘಟಕದ ಕೆಡೆಟ್ ಆಕಾಶ ಗುಡಗೆನಟ್ಟಿ ಅವರು ತಮಿಳನಾಡಿನ ತಿರುಚಿರಾಪಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎನ್‍ಸಿಸಿ ಅಂತರ ನಿರ್ದೇಶನಾಲಯ (ಡಿಜಿ ಎನ್‍ಸಿಸಿ, ನವದೆಹಲಿ) ಶೂಟಿಂಗ್ ಚಾಂಪಿಯನ್‍ಶಿಫ್‍ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದ 92ಕ್ಕೂ ಹೆಚ್ಚು ಎನ್‍ಸಿಸಿ ಕೆಡೆಟ್‍ಗಳಲ್ಲಿ ಆಕಾಶ ಗುಡಗೆನಟ್ಟಿ ಅಂತಿಮ ಘಟ್ಟದ ಅಗ್ರ ಶ್ರೇಯಾಂಕದ 18ರಲ್ಲಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT