ADVERTISEMENT

ಚನ್ನಮ್ಮನ ಕಿತ್ತೂರು | ಎರಡು ಅನಧಿಕೃತ ಕ್ಲಿನಿಕ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:43 IST
Last Updated 26 ಜೂನ್ 2024, 15:43 IST
ಚನ್ನಮ್ಮನ ಕಿತ್ತೂರಿನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜಮಾದಾರ ಕ್ಲಿನಿಕ್‌ಗೆ ಆರೋಗ್ಯಾಧಿಕಾರಿಗಳ ತಂಡ ಬೀಗ ಜಡಿದಿದೆ
ಚನ್ನಮ್ಮನ ಕಿತ್ತೂರಿನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜಮಾದಾರ ಕ್ಲಿನಿಕ್‌ಗೆ ಆರೋಗ್ಯಾಧಿಕಾರಿಗಳ ತಂಡ ಬೀಗ ಜಡಿದಿದೆ   

ಚನ್ನಮ್ಮನ ಕಿತ್ತೂರು: ಇಲ್ಲಿಯ ಗುರುವಾರ ಪೇಟೆಯಲ್ಲಿಅನಧಿಕೃತವಾಗಿ ನಡೆಸುತ್ತಿದ್ದ ಎರಡು ಕ್ಲಿನಿಕ್‌ಗಳಿಗೆ ಬುಧವಾರ ತಾಲ್ಲೂಕು ಆರೋಗ್ಯಾಧಿಕಾರಿ ತಂಡವು  ಬೀಗ ಜಡಿದಿದ್ದಾರೆ.

‘ಪೊಲೀಸ್ ಠಾಣೆ ಎದುರು ತೆರೆದಿದ್ದ ಮಹೇಶ ಹಟ್ಟಿಹೊಳಿಗೆ ಸೇರಿದ ‘ಧನ್ವಂತರಿ ಕ್ಲಿನಿಕ್’ ಹಾಗೂ ರೈತರ ಓಣಿ ಬಳಿ ಇರುವ ಇಬ್ರಾಹಿಂ ಜಮಾದಾರ್ ಗೆ ಸೇರಿದ ‘ಜಮಾದಾರ ಕ್ಲಿನಿಕ್’ ಅನ್ನು ಪರವಾನಗಿ ಇಲ್ಲದೆ ನಡೆಸುತ್ತಿದ್ದರು. ಇವುಗಳನ್ನು ಬಂದ್ ಮಾಡಲಾಗಿದೆ. ಎರಡು ಕ್ಲಿನಿಕ್‌ನಲ್ಲಿದ್ದ ಅಲೋಪಥಿ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ ತಿಳಿಸಿದರು.

‘ಹಟ್ಟಿಹೊಳಿ ಅವರು ಬಿಎಎಂಎಸ್ ಹಾಗೂ ಜಮಾದಾರ ಅವರು ಬಿಎಚ್ಎಂಎಸ್ ಪದವಿ ಪಡೆದ ವೈದ್ಯರಾಗಿದ್ದಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಎಸ್) ಕಾಯಿದೆ ಅಡಿ ಕ್ಲಿನಿಕ್ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಮಾದ್ ರಾಜಗೋಳಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.