ಹುಕ್ಕೇರಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್.ಡಿ.ಎ. ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ಮತಕ್ಷೇತ್ರದಲ್ಲೂ ಜನರಿಗೆ ಬಿಜೆಪಿ ಪರ ಒಲವಿದೆ’ ಎಂದು ಸಂಸದ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಅವರು ಸ್ಥಳೀಯ ಹಿರೇಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು, ‘ಜನರು ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಕಡೆಗೆ ಆದ್ಯತೆ’ ನೀಡುತ್ತಿದ್ದಾರೆ ಎಂದರು.
ಮಠಕ್ಕೆ ದೌಡ್: ಇದಕ್ಕೂ ಮೊದಲು ತಾಲ್ಲೂಕಿನ ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ವಿರಕ್ತಮಠದ ಕಾಶಿನಾಥ ಸ್ವಾಮೀಜಿ ಮತ್ತು ಜಾಂಗಟಿಹಾಳ ಗ್ರಾಮದ ಯಲ್ಲಾಲಿಂಗ ಮಠದ ಚಂದ್ರಶೇಖರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮುಖಂಡರಾದ ಮಹಾವೀರ ಬಾಗಿ, ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಎಸ್.ಕೆ.ಪಬ್ಲಿಕ್ ಸ್ಕೂಲ್ ಚೇರ್ಮನ್ ಪಿಂಟು ಶೆಟ್ಟಿ, ಸಂಜು ಬಸ್ತವಾಡ, ಸವಿತಾ ಏಣಗಿಮಠ, ದ್ರಾಕ್ಷಾಯಿಣಿ ಅಮ್ಮಣಗಿ, ಚಿದಾನಂದ ಕಿಲ್ಲೇದಾರ್, ಆನಂದ ಮರೆನ್ನವರ, ಸುರೇಶ್ ಜಿನರಾಳಿ ಸಾಥ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.