ADVERTISEMENT

ಬೆಳಗಾವಿ: ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 6:38 IST
Last Updated 12 ನವೆಂಬರ್ 2024, 6:38 IST
<div class="paragraphs"><p>ಬೆಳಗಾವಿಯಲ್ಲಿರುವ ವೆಂಕಟೇಶ ಮಜುಂದಾರ್ ಅವರ ಮನೆ</p></div>

ಬೆಳಗಾವಿಯಲ್ಲಿರುವ ವೆಂಕಟೇಶ ಮಜುಂದಾರ್ ಅವರ ಮನೆ

   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಮೂರು ಕಡೆ ಮೂವರು ಅಧಿಕಾರಿಗಳ ಮನೆಗಳ ಮೇಲೆ‌ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದರು.

ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಮನೆ ಖರೀದಿಸಿದ್ದಾರೆ.

ADVERTISEMENT

ಗೋವಿಂದ ಹನುಮಂತಪ್ಪ ಭಜಂತ್ತಿ ಅವರ ಮನೆ

ಇನ್ನೊಂದೆಡೆ, ನಿಪ್ಪಾಣಿ ‌ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಅವರ ಮನೆ ಮೇಲೂ ‌ದಾಳಿ ಮಾಡಲಾಗಿದೆ. ಮೂರು ತಿಂಗಳ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವೇಳೆ ವಿಠ್ಠಲ ಸಿಕ್ಕಿಬಿದ್ದಿದ್ದರು. ಅವರ ಬಳಿ ದಾಖಲೆ ಇಲ್ಲದ ₹1.10 ಕೋಟಿ ಹಣ ಪತ್ತೆಯಾಗುತ್ತು. ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ ಮಾಡಿ ಈ ಹಣ ವಶಕ್ಕೆ ಪಡೆದಿದ್ದರು. ಇದೇ ಹಿನ್ನೆಲೆಯಲ್ಲಿ ವಿಠ್ಠಲ ‌ಮನೆ, ಕಚೇರಿ ಮೇಲೂ ‌ದಾಳಿ ಮಾಡಲಾಗಿದೆ. ನಿಪ್ಪಾಣಿ ನಗರದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ ದಾಖಲೆ‌ ಇಲ್ಲದ ಮತ್ತಷ್ಟು ಹಣ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ವಿಠ್ಠಲ ಢವಳೇಶ್ವರ ಮನೆ

ಮತ್ತೊಂದೆಡೆ, ಧಾರವಾಡದ ಕೆಐಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಮನೆ ಮೇಲೂ ದಾಳಿ ಮಾಡಲಾಗಿದೆ. ಸವದತ್ತಿ ತಾಲ್ಲೂಕಿನ ಉಗರಗೋಳದಲ್ಲಿ‌ ಗೋವಿಂದಪ್ಪ ಫಾರ್ಮ್‌ಹೌಸ್ ಹೊಂದಿದ್ದಾರೆ. ಅವರ ‌ಧಾರವಾಡದ ಮನೆ‌ ಹಾಗೂ ಉಗರಗೋಳ ಫಾರ್ಮ್‌ಹೌಸ್ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ವಶಕ್ಕೆ ಪಡೆದರು.

ಉಗರಗೋಳದಲ್ಲಿರುವ ವಿಠ್ಠಲ ಅವರ ಫಾರ್ಮ್ ಹೌಸ್

ಬೆಳಗಾವಿ ಲೋಕಾಯುಕ್ತ ಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಎಲ್ಲ ಕಡೆ ದಾಳಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.