ADVERTISEMENT

ಹಿರೇಬಾಗೇವಾಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿ: ಚಾಲಕ, ಕ್ಲೀನರ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 6:00 IST
Last Updated 14 ಅಕ್ಟೋಬರ್ 2023, 6:00 IST
   

ಹಿರೇಬಾಗೇವಾಡಿ (ಬೆಳಗಾವಿ): ಇಲ್ಲಿನ ಬಸವನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯ ಟೈರ್‌ ಒಡೆದು, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಚಾಲಕ ಮತ್ತು ಕ್ಲೀನರ್‌ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಲಾರಿಯಲ್ಲಿ ಪಂಜಾಬಿನಿಂದ ಹುಬ್ಬಳ್ಳಿಗೆ ಸೇಬು ಹಣ್ಣು ಸಾಗಿಸಲಾಗುತ್ತಿತ್ತು. ಲಾರಿ ಪಲ್ಟಿ ಹೊಡೆದು ಬಿದ್ದ ಕಾರಣ ಅಪಾರ ಪ್ರಮಾಣದ ಸೇಬು ಹಣ್ಣು ನಾಶವಾದವು.

ADVERTISEMENT

ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.