ADVERTISEMENT

ಸಂಕೇಶ್ವರ ಮಾರುಕಟ್ಟೆಗೆ ಮಹಾರಾಷ್ಟ್ರ ಮಾವಿನಕಾಯಿ ಲಗ್ಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 14:11 IST
Last Updated 31 ಮಾರ್ಚ್ 2024, 14:11 IST
ಸಂಕೇಶ್ವರ ಪಟ್ಟಣದಲ್ಲಿ ದೇವಗಡ ಆಪೂಸ್ ಮತ್ತು ರತ್ನಾಗಿರಿ ಆಪೂಸ್‌ ಮಾವಿನಕಾಯಿಗಳನ್ನು ಮಾರುತ್ತಿರುವ ವ್ಯಾಪಾರಿ
ಸಂಕೇಶ್ವರ ಪಟ್ಟಣದಲ್ಲಿ ದೇವಗಡ ಆಪೂಸ್ ಮತ್ತು ರತ್ನಾಗಿರಿ ಆಪೂಸ್‌ ಮಾವಿನಕಾಯಿಗಳನ್ನು ಮಾರುತ್ತಿರುವ ವ್ಯಾಪಾರಿ   

ಸಂಕೇಶ್ವರ: ಸಂಕೇಶ್ವರ ಪಟ್ಟಣಕ್ಕೆ ಮಹಾರಾಷ್ಟ್ರದಿಂದ ಮಾವಿನಕಾಯಿಗಳು ಬರುತ್ತಿದ್ದು ಪಟ್ಟಣದ ತುಂಬೆಲ್ಲ ಮಾವಿನಕಾಯಿಗಳದ್ದೇ ರಾಶಿ. ಆದರೆ ದರ ಮಾತ್ರ ಗಗನಕ್ಕೇರಿದ್ದು  ದುಬಾರಿ ದರಕ್ಕೆ ಮಾವಿನಕಾಯಿಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

ದೇವಗಡ ಆಪೂಸ್ ಮಾವಿನಕಾಯಿ ದರ ಒಂದು ಡಜನ್ನಿಗೆ ₹800 ರಿಂದ ₹1,000 ಗಳಿದ್ದು ರತ್ನಾಗಿರಿ ಆಪೂಸ್ ಮಾವಿನಕಾಯಿ ದರ ₹1,200 ರೂಪಾಯಿಗಳಷ್ಟಿದೆ. ಯುಗಾದಿ ನಂತರವೇ ಮಾವಿನ ಹಣ್ಣಿನ ದರ ಇಳಿಮುಖವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT