ಪ್ರಜಾವಾಣಿ ವಾರ್ತೆ
ಹುಕ್ಕೇರಿ: ಸ್ಥಳೀಯ ಮಹಾವೀರ ವಿವಿಧೋದ್ದೇಶ ಸಹಕಾರಿ ಸಂಘದ 16ನೇ ಶಾಖೆಯನ್ನು ಬೆಳಗಾವಿ ನಗರದ ಅನಗೋಳದ ರಘುನಾಥ ಪೇಟ, ಹನಮನ್ನವರ ಗಲ್ಲಿಯಲ್ಲಿ ನ.19 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಮತ್ತು ಸರಸ್ವತಿ ಪೂಜೆ ಜರುಗುವುದು ಎಂದರು.
‘ಸಂಸ್ಥೆಯು 2000 ಇಸವಿಯಲ್ಲಿ ಪ್ರಾರಂಭವಾಗಿ, 15 ಶಾಖೆ ಹೊಂದಿ 2,650 ಸದಸ್ಯರನ್ನು ಹೊಂದಿದೆ. ₹34.86 ಲಕ್ಷ ಷೇರು ಬಂಡವಾಳ ಮತ್ತು ₹6.99 ಕೋಟಿ ನಿಧಿ ಹೊಂದಿದೆ’ ಎಂದು ತಿಳಿಸಿದರು.
‘ಸಂಸ್ಥೆಯು ₹197.62 ಕೋಟಿ ಠೇವು, ₹21.61 ಕೋಟಿ ಗುಂತಾವಣೆ, ₹222.04 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹180 ಕೋಟಿ ಸಾಲ ವಿತರಿಸಿ, ₹2.65 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದರು.
‘ಬೆಳಗಾವಿ ಶಾಖೆಗೆ ಜಯಪಾಲ ಟಕಾಯಿ, ಬಾಬುರಾವ್ ಸಾತಗೌಡ, ಪ್ರಮೋದ ಪಾಟೀಲ ಮತ್ತು ಸ್ಮೀತಾ ಪಾಟೀಲ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ’ ಎಂದರು.
ಉಪಾಧ್ಯಕ್ಷ ಕಿರಣ ಸೊಲ್ಲಾಪುರೆ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪುರೆ, ಪ್ರಜ್ವಲ್ ನಿಲಜಗಿ, ಕಿರಣ ಸೊಲ್ಲಾಪುರೆ, ರೋಹಿತ್ ಚೌಗಲಾ, ಸಂಗೀತಾ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಸಿಇಒ ರಾಜೇಂದ್ರ ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.