ADVERTISEMENT

ಪ್ರಜ್ವಲ್ ವಿರುದ್ಧ ಜೆಡಿಎಸ್ ಕ್ರಮ ಕೈಗೊಳ್ಳಬೇಕೇ ಹೊರತು ಬಿಜೆಪಿಯಲ್ಲ: ಮಾಳವಿಕಾ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:43 IST
Last Updated 1 ಮೇ 2024, 15:43 IST
ಮಾಳವಿಕ ಅವಿನಾಶ್‌
ಮಾಳವಿಕ ಅವಿನಾಶ್‌   

ಬೆಳಗಾವಿ: ‘ಚುನಾವಣೆಯಲ್ಲಿ ಗೆದ್ದರೆ, ಪ್ರಜ್ವಲ್‌ ರೇವಣ್ಣ ಎನ್‌ಡಿಎ ಮೈತ್ರಿಕೂಟದ ಸಂಸದರಾಗುತ್ತಾರೆ. ಜೆಡಿಎಸ್‌ನಲ್ಲಿ ಇರುವ ಅವರ ವಿರುದ್ಧ ಆ ಪಕ್ಷವೇ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ ಹೇಳಿದರು.

‘ಪ್ರಜ್ವಲ್ ಲೈಂಗಿಕ ದೌರ್ಜನ್ಯ ಬಿಜೆಪಿ ವರಿಷ್ಠರಿಗೆ ಮೊದಲೇ ಗೊತ್ತಿದ್ದರೂ ಟಿಕೆಟ್ ಏಕೆ ಕೊಟ್ಟರು’ ಎಂಬ ಸುದ್ದಿಗಾರರ ಪ್ರಶ್ನೆಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನಾವು ಈ ಸಲ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು,  ಮೂರು ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಆ ಪಕ್ಷ ತೀರ್ಮಾನಿಸಬೇಕು’ ಎಂದರು.

‘ವಿದ್ಯಾರ್ಥಿನಿ ನೇಹಾ ಕೊಲೆ ಮತ್ತು ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣಗಳು ಎರಡೂ ಒಂದೇ ಅಲ್ಲ. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಬಗ್ಗೆ ಮೃದು ಧೋರಣೆ ತಾಳಿದ್ದರಿಂದ, ರಾಜ್ಯದಲ್ಲಿ ಕೊಲೆಯಂಥ ಘಟನೆ ನಡೆಯುತ್ತಿದೆ. ‘ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣ ಸಮಾಜವೇ ತಲೆ ತಗ್ಗಿಸುವಂಥದ್ದು. ಆದರೆ, ಸಂತ್ರಸ್ತ ಮಹಿಳೆಯರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದೂ ದೊಡ್ಡ ತಪ್ಪು. ಈ ಕೃತ್ಯ ಎಸಗಿದವರನ್ನು ಬಂಧಿಸಬೇಕು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.