ಸ್ತ್ರೀ ಕುಲದ ಶುಭ ಸಂಕೇತಗಳು ಎಂದೇ ಹೇಳುವ ಗಾಜಿನ ಬಳೆಗಳನ್ನು ತಯಾರಿಸುವ ಹಲವು ಭಟ್ಟಿಗಳು ಬೆಳಗಾವಿ ಜಿಲ್ಲೆಯ ಮುರಗೋಡ ಮತ್ತು ಚನ್ನಮ್ಮನ ಕಿತ್ತೂರಿನಲ್ಲಿವೆ. ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಮತ್ತಿತರ ನಗರಗಳು ಹಾಗೂ ಮಹಾರಾಷ್ಟ್ರದಲ್ಲಿ ಈ ಬಳೆಗಳು ಮಾರಾಟವಾಗುತ್ತವೆ. ಸಾಮಾನ್ಯವಾಗಿ ಪ್ರತಿ ಭಟ್ಟಿಯವರು ವಾರ್ಷಿಕ ₹30 ಲಕ್ಷ ವಹಿವಾಟು ಮಾಡುತ್ತಾರೆ. ಉತ್ತರ ಕರ್ನಾಟಕದ ಜಾತ್ರೆಗಳೇ ಈ ಬಳೆಗಳಿಗೆ ಆಸರೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.