ಬೆಳಗಾವಿ: ಇಲ್ಲಿನ ಮರಾಠಾ ಮಂದಿರದಲ್ಲಿ ಭಾನುವಾರ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಮುಖಂಡರು ಸಭೆ ನಡೆಸಿದರು. ನವೆಂಬರ್ 1ರಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಕರಾಳ ದಿನಾಚರಣೆ ಮಾಡಿಯೇ ಸಿದ್ಧ ಎಂಬ ನಿರ್ಣಯ ಕೈಗೊಂಡರು.
ಎಂಇಎಸ್ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖಂಡರು ಒಕ್ಕೊರಲಿನಿಂದ ಅವಕಾಶಕ್ಕೆ ಒತ್ತಾಯಿಸಿದರು.
‘ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಸರ್ಕಾರ ಬೆಲೆ ಕೊಡುತ್ತಿಲ್ಲ. ಗಡಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಮುಂದುವರಿಸಿದೆ. ಗಡಿ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇರುವಾಗ ಗಡಿ ಭಾಗದ ಎರಡೂ ಕಡೆಯ ಜನರಿಗೆ ಸಮಾನ ಹಕ್ಕು, ಅವಕಾಶಗಳು ಇರುತ್ತವೆ. ಈ ದೃಷ್ಟಿಯಿಲ್ಲಿ ಕರಾಳ ದಿನಾಚರಣೆಗೆ ಅವಕಾಸ ಕೊಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.