ADVERTISEMENT

ಹಿರಿಯರ ಸೇವೆ ದೇವರ ಸೇವೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 5:55 IST
Last Updated 29 ಡಿಸೆಂಬರ್ 2023, 5:55 IST
<div class="paragraphs"><p>ಬೆಳಗಾವಿ ತಾಲ್ಲೂಕಿನ ಭಾಮನವಾಡಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಮಹಿಳೆಯರ ಹೆಚ್ಚುವರಿ ವಸತಿಗೃಹವನ್ನು ಲಕ್ಷ್ಮಿ ಹೆಬ್ಬಾಳಕರ ಗುರುವಾರ ಉದ್ಘಾಟಿಸಿದರು</p></div>

ಬೆಳಗಾವಿ ತಾಲ್ಲೂಕಿನ ಭಾಮನವಾಡಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಮಹಿಳೆಯರ ಹೆಚ್ಚುವರಿ ವಸತಿಗೃಹವನ್ನು ಲಕ್ಷ್ಮಿ ಹೆಬ್ಬಾಳಕರ ಗುರುವಾರ ಉದ್ಘಾಟಿಸಿದರು

   

ಬೆಳಗಾವಿ: ‘ಹಿರಿಯ ನಾಗರಿಕರೇ ನಮಗೆ ಕಣ್ಣಿಗೆ ಕಾಣುವ ದೇವರು. ಅವರ ಸೇವೆ ಮೂಲಕ ದೇವರ ಸೇವೆ ಮಾಡೋಣ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಭಾಮನವಾಡಿಯ ಶಾಂತಾಯಿ ವೃದ್ದಾಶ್ರಮದಲ್ಲಿ ಮಹಿಳೆಯರ ಹೆಚ್ಚುವರಿ ವಸತಿಗೃಹವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಸಮಾಜದಲ್ಲಿ ದುರ್ಬಲರೆಂದು ಗುರುತಿಸಲ್ಪಟ್ಟಿರುವ ಹಿರಿಯ ನಾಗರಿಕರು, ಅಂಗವಿಕಲರು, ಮಹಿಳೆಯರು ಮತ್ತು ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗದು’ ಎಂದ ಅವರು, ‘ವೃದ್ಧಾಶ್ರಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲಾಗುವುದು. ಆಶ್ರಮಕ್ಕೆ ಸರ್ಕಾರದಿಂದ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ವೃದ್ದಾಶ್ರಮದ ಅಧ್ಯಕ್ಷ ವಿಜಯ ಪಾಟೀಲ, ಕಾರ್ಯಾಧ್ಯಕ್ಷ ವಿಜಯ ಮೋರೆ, ಜಯಂತ ಹುಂಬರವಾಡಿ, ಸಮೀರ  ಕಣಬರ್ಗಿ, ಕಿತ್ ಮಚಾಡೊ, ದಿಲೀಪ ಚಿಟ್ನೀಸ್‌, ಸಿದ್ಧಾರೂಢ ಹುಂದ್ರೆ, ಆನಂದ ದೇಸಾಯಿ, ಪ್ರವೀಣ ದೊಡ್ಡಣ್ಣವರ, ವಿಶ್ವನಾಥ್ ಸಾಮಂತ, ರಾಜೇಂದ್ರ ಹರಕುಣಿ, ನಿಲೇಶ ಕೋಚಾ, ಬಸವನಗೌಡ ಪಾಟೀಲ, ಯುವರಾಜ ಕದಂ, ಶಂಕುಂತಲಾ ಹಣಬರ, ಪ್ರಿಯಾಂಕಾ ಪಾಟೀಲ ಇದ್ದರು. ಅಲನ್ ಮೋರೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.