ಬೆಲ್ಲದ ಬಾಗೇವಾಡಿ: ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ (62) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಬುಧವಾರ ರಾತ್ರಿ 10ಕ್ಕೆ ನೆರವೇರಿತು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹಲವು ಮಠಾಧೀಶರು, ಪೂಜ್ಯರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೊಸಲಾಯಿತು.
ಉಮೇಶ ಅವರ ತಾತ, ತಂದೆ, ತಾಯಿ ಸಮಾಧಿ ಇರುವ ಅವರ ತೋಟದಲ್ಲಿಯೇ ಉಮೇಶ ಅವರನ್ನೂ ಮಣ್ಣು ಮಾಡಲಾಯಿತು.
ಇದಕ್ಕೂ ಮುನ್ನ ವಿಶ್ವರಾಜ್ ಸಕ್ಕರೆ ಕಾರ್ಖಾನೆ ಆವರಣದಿಂದ ಆರಂಭಗೊಂಡ ಅಂತಿಮಯಾತ್ರೆಯು ಬೆಲ್ಲದ ಬಾಗೇವಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ.
ಹಲವು ಯುವಕರು, ಹಿರಿಯರು ಕೂಡ ಹೆಜ್ಜೆಹಾಕಿದರು. ಅಭಿಮಾನಿಗಳು ಬಾಯಿ ಬಡಿದುಕೊಂಡು ಸಂಕಟ ವ್ಯಕ್ತಪಡಿಸಿದರು.
ರಾತ್ರಿ 9.30 ಗಂಟೆಗೆ ಮೆರವಣಿಗೆ ತೋಟವನ್ನು ತಲುಪಿತು. ಧಾರ್ಮಿಕ ವಿಧಿವಿಧಾನದ ಬಳಿಕ ಅಂತ್ಯಕ್ರಿಯೆ ಮಾಡಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಅಗಲಿದ ಮುಖಂಡನಿಗೆ ಹಿಡಿ ಮಣ್ಣು ಹಾಕಿ ಅಶ್ರುತರ್ಪಣೆ ಸಲ್ಲಿಸಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.