ಸುಳಗಾ(ಬೆಳಗಾವಿ ತಾಲ್ಲೂಕು): ಹೊಸ ವರ್ಷದ ಮೊದಲ ದಿನವೇ ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟ ಘಟನೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸುಳಗಾದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಘಟನೆ ನಡೆದಿದೆ. 'ಓಲ್ಡ್ ಮ್ಯಾನ್' ಪ್ರತಿಕೃತಿ ಸುಟ್ಟ ಬಳಿಕ, ಕನ್ನಡ ಬಾವುಟಕ್ಕೂ ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯನ್ನು ಕನ್ನಡ ಸಂಘಟನೆಗಳು ಖಂಡಿಸಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿವೆ.
ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
'ಹೊಸ ವರ್ಷಾಚರಣೆ ವೇಳೆ, ಕಿಡಿಗೇಡಿಗಳು ಕನ್ನಡ ಬಾವುಟ ಸುಟ್ಟಿದ್ದಾರೆ ಎಂದು ಗ್ರಾಮಸ್ಥರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು' ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ 'ಪ್ರಜಾವಾಣಿ'ಗೆ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.