ADVERTISEMENT

ಸವದತ್ತಿ: ದೀಪಗಳ ಅಳವಡಿಕೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:52 IST
Last Updated 2 ಜುಲೈ 2024, 15:52 IST
<div class="paragraphs"><p>ಸವದತ್ತಿಯ ಎಪಿಎಂಸಿ-ಭಗೀರಥ ವೃತ್ತದವರೆಗೆ ವಿದ್ಯುತ್ ಕಂಬ, ಅಲಂಕಾರಿಕ ದೀಪಗಳ ಅಳವಡಿಕೆ ಕಾಮಗಾರಿಗೆ ಶಾಸಕ ವಿಶ್ವಾಸ್ ವೈದ್ಯ ಭೂಮಿ ಪೂಜೆ ನೆರವೇರಿಸಿದರು </p></div>

ಸವದತ್ತಿಯ ಎಪಿಎಂಸಿ-ಭಗೀರಥ ವೃತ್ತದವರೆಗೆ ವಿದ್ಯುತ್ ಕಂಬ, ಅಲಂಕಾರಿಕ ದೀಪಗಳ ಅಳವಡಿಕೆ ಕಾಮಗಾರಿಗೆ ಶಾಸಕ ವಿಶ್ವಾಸ್ ವೈದ್ಯ ಭೂಮಿ ಪೂಜೆ ನೆರವೇರಿಸಿದರು

   

ಸವದತ್ತಿ: ರಾಜ್ಯ ಸರ್ಕಾರ ಜನರಿಗೆ ಅಗತ್ಯ ಸೌಕರ್ಯ ಒದಗಿಸುತ್ತಿದೆ. ವಿರೋಧಿಗಳ ಅಪಪ್ರಚಾರ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಶಾಸಕ ವಿಶ್ವಾಸ್ ವಿಶ್ವಾಸ್ ವೈದ್ಯ ಹೇಳಿದರು.

ಇಲ್ಲಿನ ಎಪಿಎಂಸಿ ಕ್ರಾಸ್‌ನಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 3 ಕೋಟಿ ವೆಚ್ಚದಲ್ಲಿ ಎಪಿಎಂಸಿಯಿಂದ ಭಗೀರಥ ವೃತ್ತದವರೆಗೆ ವಿದ್ಯುತ್ ಕಂಬ ಹಾಗೂ ಅಲಂಕಾರಿಕ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

₹ 3 ಕೋಟಿ ವೆಚ್ಚದಲ್ಲಿ ನಗರದ ಸೌಂದರೀಕರಣ ಹೆಚ್ಚಿಸಲು ಅಲಂಕಾರಿಕ ದೀಪಗಳು, ವಿದ್ಯುತ್ ಕಂಬಗಳ ಅಳವಡಿಸಲಾಗುವದು. ಸರಕಾರದಿಂದ ಸಾಗರೋಪಾದಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಜನತೆಯ ಸಹಕಾರ ಅತ್ಯಗತ್ಯ ಎಂದರು.

ಎಇಇ ವಿಜಯ ಸಂಗಪ್ಪಗೋಳ ಮಾತನಾಡಿ, ಅಲಂಕಾರಿಕ ದೀಪಗಳು ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಇಲ್ಲಿನ ಸಿಂಧನೂರ ಹೆಮ್ಮಡಗಾ ರಾಜ್ಯ ಹೆದ್ದಾರಿ ಕಿ.ಮೀ 198.30 ರಿಂದ 201.58ರ ಎಪಿಎಂಸಿಯಿಂದ ಭಗೀರಥ ಸರ್ಕಲ್ ವರೆಗೆ ನಡೆಯಲಿದೆ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ಅಶ್ವಥ ವೈದ್ಯ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಬಾಪೂ ಚೂರಿಖಾನ, ಎಲ್.ಎಸ್. ಜೋಗಿನ, ದಿಲಾವರ ಸನದಿ, ಬಸವರಾಜ ಆಯಟ್ಟಿ, ಫಕ್ರುಸಾಬ ದೊಡಮನಿ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.