ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ 23 ಅಭ್ಯರ್ಥಿಗಳ ಪೈಕಿ 22 ಮಂದಿ ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರಕ್ಕೆ ಬಂದರು. ಕಾಂಗ್ರೆಸ್‍ನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮಾತ್ರ ಬೆಳಿಗ್ಗೆ 11ರವರೆಗೂ ಇತ್ತ ಸುಳಿಯಲಿಲ್ಲ.
ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಪದವೀಧರ ಅಭ್ಯರ್ಥಿ ಹಣಮಂತ ನಿರಾಣಿ ಬೆಳಿಗ್ಗೆ 8ರ ಸುಮಾರಿಗೇ ಒಳಗೆ ಬಂದರು. ನಂತರ ಕಾಂಗ್ರೆಸ್‍ನ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ, ಶಿಕ್ಷಕರ ಕ್ಷೇತ್ರದ ಜೆಡಿಎಸ್‍ನ ಚಂದ್ರಶೇಖರ ಲೋಣಿ ಬಂದರು.
ಯಾರು ಯಾರು ಬಂದಿದ್ದಾರೆ: ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಾದ ಎನ್.ಬಿ.ಬನ್ನೂರ, ಶ್ರೀನಿವಾಸಗೌಡ ಗೌಡರ, ಅಪ್ಪಾಸಾಹೇಬ ಕುರಣೆ, ಚಂದ್ರಶೇಖರ ಗುಡಸಿ, ಬಸಪ್ಪ ಮಣಿಗಾರ, ಶ್ರೀಕಾಂತ ಪಾಟೀಲ, ಶ್ರೇಣಿಕ್ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ದೇಸಾಯಿ, ಪದವೀಧರ ಕ್ಷೇತ್ರದಲ್ಲಿ ಸರ್ವಜನತಾ ಪಕ್ಷದಿಂದ ಜಿ.ಸಿ.ಪಟೇಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್., ನಿಂಗಪ್ಪ ಭಜಂತ್ರಿ, ಭೀಮಸೇನ ಬಾಗಿ, ರಾಜನಗೌಡ ಪಾಟೀಲ, ಸುಭಾಷ ಕೋಟೆಕಲ್ ತಮ್ಮ ಏಜೆಂಟರೊಂದಿಗೆ ಮತ ಎಣಿಕೆ ಟೇಬಲ್ ಮುಂದೆ ಠಿಕಾಣೆ ಹೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.