ADVERTISEMENT

ಬೆಳಗಾವಿ: ಅಚ್ಚರಿ ಮೂಡಿಸಿದ ಎರಡು ಹೆಚ್ಚುವರಿ ಮತಗಳು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:53 IST
Last Updated 15 ಜೂನ್ 2022, 4:53 IST
   

ಬೆಳಗಾವಿ: ನಗರದ ಜ್ಯೋತಿ ಕಾಲೇಜಿನಲ್ಲಿ ನಡೆದಿರುವ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಿಕ್ಕ ಎರಡು ಹೆಚ್ಚುವರಿ ಮತಗಳು ಅಚ್ಚರಿ ಮತ್ತು ಗೊಂದಲ ಮೂಡಿಸಿತು.

ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ 77 ಮತಗಟ್ಟೆಗಳ ಮತ ಪೆಟ್ಟಿಗೆಯನ್ನು ತೆರೆದು ಎಣಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ರೋಟರಿ ಶಾಲೆ ಮತಗಟ್ಟೆಯ ಪೆಟ್ಟಿಗೆಯಲ್ಲಿ 2 ಹೆಚ್ಚುವರಿ ಮತಗಳು ಸಿಕ್ಕವು. ಈ ಮತಗಟ್ಟೆಯಲ್ಲಿ ಒಟ್ಟು 757 ಮತಗಳು ಚಲವಣೆಗೊಂಡಿದ್ದವು. ಎಣಿಕೆಯಲ್ಲಿ 759 ಮತಗಳು ಸಿಕ್ಕಿದ್ದು ಗೊಂದಲಕ್ಕೆ ಕಾರಣವಾಯಿತು.

ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾಲ್ಕು ಬಾರಿ ಮತಗಳ ಎಣಿಕೆ ಮಾಡಿದರೂ 2 ಮತಗಳು ಹೆಚ್ಚಿಗೆ ಬಂದಿದ್ದರಿಂದ ಚುನಾವಣಾ ಅಧಿಕಾರಿಗಳು ಅಲ್ಲಿನ ಮತಗಳ ಸಂಖ್ಯೆಯನ್ನು 759 ಎಂದು ದಾಖಲಿಸಿದರು.

ADVERTISEMENT

ಹೀಗಾಗಿ ಈಗ ಒಟ್ಟು ಚಲಾಯಿತ ಮತಗಳ ಸಂಖ್ಯೆ 15,577ರ ಬದಲು 15,579 ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.