ADVERTISEMENT

ಕಾಗವಾಡ: ಚಾಕು ಇರಿದು ಮಗು ಕೊಂದ ತಾಯಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:10 IST
Last Updated 10 ನವೆಂಬರ್ 2024, 0:10 IST
ಸಾತ್ವಿಕ್‌ ರಾಹುಲ ಕಟಗೇರಿ
ಸಾತ್ವಿಕ್‌ ರಾಹುಲ ಕಟಗೇರಿ   

ಕಾಗವಾಡ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಉಗಾರ ಖುರ್ದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫರೀದಖಾನ ವಾಡಿಯ ತೋಟದ ಪ್ರದೇಶದಲ್ಲಿ ಶನಿವಾರ ತಾಯಿ ತನ್ನ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ಎರಡು ವರ್ಷ 9 ತಿಂಗಳಿನ ಸಾತ್ವಿಕ್ ರಾಹುಲ ಕಟಗೇರಿ ಕೊಲೆಯಾದ ಮಗು. ತಾಯಿ ಭಾಗ್ಯಶ್ರೀ ಕೊಲೆ ಆರೋಪಿ. ಕೌಟುಂಬಿಕ ಕಲವೇ ಘಟನೆಗೆ ಕಾರಣ ಆಗಿರಬಹುದು’ ಎಂದು ಕಾಗವಾಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ಏಳು ವರ್ಷಗಳ ಹಿಂದೆ ಮದುವೆಯಾದ ರಾಹುಲ್‌ ಮಾರುತಿ ಕಟಗೇರಿ ಮತ್ತು ಭಾಗ್ಯಶ್ರೀ ದಂಪ ಫರೀದಖಾನ ವಾಡಿಯ ತೋಟದ ಮನೆಯಲ್ಲಿ ವಾಸವಿದ್ದರು. ಪ್ರಾಣಾಪಾಯದಿಂದ ಪಾರಾದ ತಾಯಿಯನ್ನು ಬಂಧಿಸಲಾಗಿದೆ. ಮಗವಿನ ತಂದೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.