ADVERTISEMENT

₹13.35 ಕೋಟಿ ವೆಚ್ಚದ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:31 IST
Last Updated 9 ನವೆಂಬರ್ 2024, 15:31 IST
ಬೆಳಗಾವಿ ತಾಲ್ಲೂಕಿನ ಕಲಕಾಂಬ ಗ್ರಾಮದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು
ಬೆಳಗಾವಿ ತಾಲ್ಲೂಕಿನ ಕಲಕಾಂಬ ಗ್ರಾಮದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು   

ಯಮಕನಮರಡಿ: ‘ಲೋಕಸಭೆ ಚುನಾವಣೆ ವೇಳೆಯೇ ಕೆಲ ಸಮಸ್ಯೆಗಳ ಬಗ್ಗೆ ತಾವು ಗಮನಕ್ಕೆ ತಂದಿದ್ದರಿಂದ ಯಮಕನಮರಡಿ ಕ್ಷೇತ್ರದ ಕಲಕಾಂಬ, ಚಂದಘಡ, ಅಷ್ಟೆ, ಮುಚ್ಚಂಡಿ ಗ್ರಾಮದಲ್ಲಿ ಒಟ್ಟು ₹13.35 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ’ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಲಕಾಂಬ ಗ್ರಾಮದಲ್ಲಿ ₹4.5 ಕೋಟಿ, ಚಂದಗಡ ಗ್ರಾಮದಲ್ಲಿ ₹70 ಲಕ್ಷ, ಅಷ್ಟೆ ಗ್ರಾಮದಲ್ಲಿ ₹1.80 ಕೋಟಿ ಮತ್ತು ಮುಚ್ಚಂಡಿ ಗ್ರಾಮದಲ್ಲಿ ₹6.80 ಕೋಟಿ ವೆಚ್ಚದ ರಸ್ತೆ ನಿರ್ಮಾಣ, ರಸ್ತೆ ಸುಧಾರಣೆ, ಕಲ್ಯಾಣ ಮಂಟಪ, ಬದು ನಿರ್ವಹಣೆ, ಒಳಚರಂಡಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳೆದ 18 ವರ್ಷಗಳ ಅವಧಿಯಲ್ಲಿ ಯಮಕನಮರಡಿ ಕ್ಷೇತ್ರವನ್ನು ತಂದೆ, ಸಚಿವ ಸತೀಶ ಜಾರಕಿಹೊಳಿ ಅವರು ಮಾದರಿ ಕೇತ್ರವನ್ನಾಗಿ ಮಾಡಿದ್ದಾರೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ತಮ್ಮ ನಿರೀಕ್ಷೆಯಂತೆ ಮತಗಳನ್ನು ಸಿಕ್ಕಿಲ್ಲ. ತಂದೆಯವರು ಶೈಕ್ಷಣಿಕ ಪ್ರಗತಿಗೆ ಸಾಕಷು ಕೊಡುಗೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಆದರೂ ಹೆಚ್ಚಿನ ಮತಗಳು ತಾವು ನೀಡಬೇಕು. ನೀವು ಹೆಚ್ಚಿನ ಮತಗಳನ್ನು ನೀಡಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಮಗೆ ಹುಮ್ಮಸ್ಸು ಬರುತ್ತದೆ’ ಎಂದರು.

ADVERTISEMENT

ಇದೇ ವೇಳೆ ಕಲಕಾಂಬ, ಚಂದಗಡ, ಅಷ್ಟೆ, ಮುಚ್ಚಂಡಿ ಗ್ರಾಮದ ವಿವಿಧ ಸಂಘ, ಸಂಸ್ಥೆ, ಕಮಿಟಿಗಳಿಂದ, ಗ್ರಾಮಸ್ಥರಿಂದ  ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.