ADVERTISEMENT

ಮೂಡಲಗಿ | ಕೋ-ಆಪರೇಟಿವ್ ಬ್ಯಾಂಕ್‌ಗೆ ₹70.22 ಲಕ್ಷ ಲಾಭ: ಸುಭಾಷ ಢವಳೇಶ್ವರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:46 IST
Last Updated 20 ಸೆಪ್ಟೆಂಬರ್ 2024, 15:46 IST
 ಮೂಡಲಗಿಯ ಕೋ ಆಪರೇಟಿವ ಬ್ಯಾಂಕ್‌ನ ಸಭೆಯಲ್ಲಿ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಮಾತನಾಡಿದರು
 ಮೂಡಲಗಿಯ ಕೋ ಆಪರೇಟಿವ ಬ್ಯಾಂಕ್‌ನ ಸಭೆಯಲ್ಲಿ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಮಾತನಾಡಿದರು   

ಮೂಡಲಗಿ: ‘ಮೂಡಲಗಿ ಕೋ ಆಪರೇಟಿವ್‌ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ₹70.22 ಲಕ್ಷ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಸುಭಾಷ ಜಿ. ಢವಳೇಶ್ವರ ಹೇಳಿದರು.

ಇಲ್ಲಿಯ ದಿ. ಮೂಡಲಗಿಯ ಕೋ ಆಪರೇಟಿವ್‌ ಬ್ಯಾಂಕ್‌ನ 74ನೇ ವರ್ಷದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‌ ಆರ್‌ಬಿಐ ನಿರ್ದೇಶನ ಮತ್ತು ಮಾರ್ಗಸೂಚಿಯಲ್ಲಿ ನಡೆಯುತ್ತದೆ ಎಂದರು.

ಮಾrfcff ಕೊನೆಯಲ್ಲಿ ಶೇರು ಬಂಡವಾಳ ₹2.21 ಕೊಟಿ, ನಿಧಿಗಳು ₹8.8 ಕೋಟಿ, ಒಟ್ಟು ಬಂಡವಾಳ ₹10.30 ಕೋಟಿ, ಒಟ್ಟು ಠೇವಣಿಗಳು ₹124.20 ಕೋಟಿ ಇದ್ದು, ₹73.64 ಕೋಟಿ ಸಾಲ ವಿತರಿಸಿದೆ. ದುರ್ಬಲ್‌ ಹರಿಜನ, ಗಿರಿಜನ ವರ್ಗದವರಿಗೆ ಶೇ 17.63 ರಷ್ಟು ಸಾಲ ಮತ್ತು ಎಂಎಸ್‌ಎಂಇ ವರ್ಗದವರಿಗೆ ₹14.11 ಕೋಟಿ ಸಾಲ ನೀಡುವ ಮೂಲಕ ಸಮಾಜದ ಎಲ್ಲ ಜನರನ್ನು ಪರಿಗಣಿಸಲಾಗಿದೆ ಎಂದರು.

ADVERTISEMENT

ಬ್ಯಾಂಕ್‌ವು ನಿವ್ವಳ ಶೇ 2.04 ಎನ್‌ಪಿಎ ಮತ್ತು ಕಟಬಾಕಿ ಪ್ರಮಾಣ ಶೇ 2.37ರಷ್ಟು ಮತ್ತು ಸಿಆರ್‌ಎಆರ್‌ ಪ್ರಮಾಣವು ಶೇ 12.82ರಷ್ಟು ಇರುವುದು ಬ್ಯಾಂಕ್‌ನ ಭದ್ರತೆಯ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲಿ ಯಪಿಐ ಮತ್ತು ಐಎಂಪಿಎಸ್‌ ಪ್ರಾರಂಭಿಸುತ್ತೇವೆ ಎಂದರು.

ಲೆಕ್ಕಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿದರು. ಬ್ಯಾಂಕ್‌ನ ಉಪಾಧ್ಯಕ್ಷ ನವೀನ ಬಡಗನ್ನವರ, ರಾಮದುರ್ಗ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶ್ರೀಧರ ಪತ್ತೆಪೂರ, ಸಿ.ಬಿ. ನಿರ್ವಾಣಿ, ಮುಗಳಖೋಡ ಶಾಖೆಯ ಉಪಾಧ್ಯಕ್ಷ ಬಸವರಾಜ ತೇರದಾಳ ಇದ್ದರು.

ಚಿದಾನಂದ ಢವಳೇಶ್ವರ ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕ ವರದಿ ವಾಚಿಸಿದರು. ಮಹೇಶ ಮಡಿವಾಳರ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.